ಬೆಂಗಳೂರು: ಸಣ್ಣ ವಿಚಾರಕ್ಕೆ ಕೋಚ್ (Coach) ಪತ್ನಿ ಹಾಗೂ ಅಥ್ಲಿಟ್ (Athlete) ನಡುವೆ ಕಂಠೀರವ ಕ್ರೀಡಾಂಗಣದಲ್ಲಿ ಗಲಾಟೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚ್ ಯತೀಶ್ ಹಾಗೂ ಪತ್ನಿ ಶ್ವೇತಾ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.
ಸಂಪಂಗಿ ರಾಮನಗರ (Sampangi Ramanagara) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಬೆಂಗಳೂರಿನ (Bengaluru) ಕಂಠೀರವ ಸ್ಟೇಡಿಯಂನಲ್ಲಿ (Kanteerava Stadium) ಬಿಂದುರಾಣಿ ಹಾಗೂ ಶ್ವೇತಾ ಮಧ್ಯೆ ಖೇಲ್‌ರತ್ನ ಪ್ರಶಸ್ತಿ ಕುರಿತ ವಿಡಿಯೋವೊಂದರ ಕುರಿತು ಜಗಳ ನಡೆದಿತ್ತು. ಕಳೆದ ಶುಕ್ರವಾರ ಅಥ್ಲಿಟ್ ಬಿಂದುರಾಣಿ ಟೆಡೆಕ್ಸ್ ಕಾರ್ಯಕ್ರಮದಲ್ಲಿ ತನ್ನ ಸಾಧನೆ ಬಗ್ಗೆ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಬಿಂದು ಸೋಶಿಯಲ್ ಮೀಡಿಯಾ ಮಾಹಿತಿಯಲ್ಲಿ ಖೇಲ್‌ರತ್ನ ಪ್ರಶಸ್ತಿ ಬಗ್ಗೆ ಪ್ರಸ್ತಾಪ ಮಾಡಿಕೊಂಡಿದ್ದರ ಕುರಿತು ಕೋಚ್ ಯತೀಶ್ ವಾಟ್ಸಪ್‌ನ ಕೋಚ್ ಗ್ರೂಪ್‌ನಲ್ಲಿ ನಿಮಗೆ ಯಾವಾಗ ಖೇಲ್‌ರತ್ನ ಪ್ರಶಸ್ತಿ ಬಂದಿದೆ ಎನ್ನುವ ರೀತಿಯಲ್ಲಿ ಬಿಂದುರಾಣಿಗೆ ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ರಸ್ತೆ ಬದಿ ಸೊಪ್ಪು ಮಾರೋ ವೃದ್ಧೆ ತಲೆಗೆ ಮಚ್ಚಿನಿಂದ ಹಲ್ಲೆ
ಈ ಕುರಿತು ಬಿಂದುರಾಣಿ ಗ್ರೂಪ್‌ನಲ್ಲಿ ಉತ್ತರಿಸದೇ ಗಂಡನ ಕಡೆಯಿಂದ ಕಾಲ್ ಮಾಡಿಸಿದ್ದಾರೆ. ಯತೀಶ್ ಸರಿಯಾಗಿ ರೆಸ್ಪಾನ್ಸ್ ಮಾಡದೇ ಹೋಗಿದ್ದಕ್ಕೆ ಬಿಂದು ಯತೀಶ್ ಅವರಿಗೆ ಮತ್ತೆ ಕಾಲ್ ಮಾಡಿದಾಗ ಕೋಚ್ ಪತ್ನಿ ಶ್ವೇತಾ ಜಿ.ಕೆ ಉತ್ತರಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಒಂದಷ್ಟು ವಾಗ್ವಾದ ನಡೆದಿದೆ. ಆ ವಿಚಾರವಾಗಿ ಶ್ವೇತಾ ಸ್ಟೇಡಿಯಂಗೆ ಬಂದು ಬಿಂದುರಾಣಿ ಜೊತೆ ಗಲಾಟೆ ಮಾಡಿಕೊಂಡಿದ್ದಲ್ಲದೆ ಬಿಂದು ಅವರನ್ನು ನಿಂದಿಸಿ ಅವರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದರು. ಇದನ್ನೂ ಓದಿ: ಕೋಚ್ ಪತ್ನಿಯಿಂದ ಅಥ್ಲಿಟ್ ಮೇಲೆ ಹಲ್ಲೆ- ವೀಡಿಯೋ ವೈರಲ್
ಘಟನೆ ಸಂಬಂಧ ಬಿಂದುರಾಣಿ ಸಂಪಂಗಿ ರಾಮ ನಗರ ಪೊಲೀಸ್ ಠಾಣೆಯಲ್ಲಿ ಶ್ವೇತಾ.ಜಿ.ಕೆ ಹಾಗೂ ಅವರ ಪತಿ ಯತೀಶ್ ವಿರುದ್ಧ ಮಾನಹಾನಿ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಬಿಂದುರಾಣಿ ಕೊಟ್ಟ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲು ಮಾಡಿಕೊಂಡಿರುವ ಸಂಪಂಗಿ ರಾಮನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ಳು – ಪತ್ನಿ ಸೇರಿ ಐವರು ಅರೆಸ್ಟ್
Web Stories