ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಪುತ್ರಿ ಅಥಿಯಾ ಶೆಟ್ಟಿ ತಮ್ಮ ಬಾಯ್‌ಫ್ರೆಂಡ್ ಕೆ.ಎಲ್ ರಾಹುಲ್ ಕ್ರಿಕೆಟ್ ಆಟಕ್ಕೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇತ್ತೀಚಿನ ಆಸ್ಟ್ರೇಲಿಯಾ ಜೊತೆಗಿನ ಮ್ಯಾಚ್‌ವೊಂದರಲ್ಲಿ ಟೀಂ ಇಂಡಿಯಾ ಪರವಾಗಿ ಕೆ.ಎಲ್ ರಾಹುಲ್(K l Rahul) ಆಟ ನೋಡಿ, ಅಥಿಯಾ ಫಿದಾ ಆಗಿದ್ದಾರೆ.
ಸಾಕಷ್ಟು ವರ್ಷಗಳಿಂದ ರಾಹುಲ್ ಮತ್ತು ಅಥಿಯಾ ಶೆಟ್ಟಿ (Athiya Shetty) ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಅಥಿಯಾ ನಿವಾಸದಲ್ಲೇ ಮದುವೆ ಆಗಲು ಈ ಜೋಡಿ ಪ್ಲ್ಯಾನ್ ಮಾಡಿದ್ದಾರೆ. ಇನ್ನೂ ನಿನ್ನೆ ನಡೆದ (ಸೆ.20) ಕ್ರಿಕೆಟ್ ಮ್ಯಾಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಡಿಯಾ ಮ್ಯಾಚ್ ಸೋತಿತ್ತು. ಆದರೆ ಕೆ.ಎಲ್ ರಾಹುಲ್ ಈ ಮ್ಯಾಚ್‌ನಲ್ಲಿ ಅರ್ಧ ಶತಕ ಬಾರಿಸಿ ಅನೇಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದರು. ಹಾಗೆಯೇ ಪ್ರೇಯಸಿ ಅಥಿಯಾ ಮನಗೆಲ್ಲುವುದರಲ್ಲಿ ರಾಹುಲ್ ಯಶಸ್ವಿಯಾದರು.
ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪೈಪೋಟಿ ನೀಡಿ, ಸೋತಿತ್ತು. ಆದರೆ ಕೆ.ಎಲ್ ರಾಹುಲ್ ಆಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅರ್ಧ ಶತಕ ಬಾರಿಸಿರುವ ರಾಹುಲ್ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ನಟಿ ಶೇರ್ ಮಾಡಿದ್ದಾರೆ.
ಇನ್ನು ನಟಿ ಅಥಿಯಾ ಶೆಟ್ಟಿ ಬಿಟೌನ್ ಕೆಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಮಧ್ಯೆ ಮದುವೆಯ ತಯಾರಿ ಕೂಡ ಭರ್ಜರಿಯಾಗಿ ತೆರೆಮರೆಯಲ್ಲಿ ನಡೆಯುತ್ತಿದೆ.