ಬಾಲಿವುಡ್ನ (Bollywood) ಲವ್ ಬರ್ಡ್ಸ್ ಅಥಿಯಾ ಶೆಟ್ಟಿ (Athiya Shetty) ಮತ್ತು ಕೆ.ಎಲ್ ರಾಹುಲ್ (KL Rahul) ಸೋಮವಾರ (ಜ.23)ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಕಷ್ಟು ವರ್ಷಗಳು ಪ್ರೀತಿಗೆ ಮದುವೆಯೆಂಬ (Wedding) ಮುದ್ರೆ ಒತ್ತಿದ್ದಾರೆ. ಈ ಚೆಂದದ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಹೀರೋ ಸಿನಿಮಾದ ನಟಿ ಅಥಿಯಾ ಶೆಟ್ಟಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸೋಮವಾರ(ಜ.23)ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದೆ. ಸುನೀಲ್ ಶೆಟ್ಟಿ ಅವರ ಬಂಗಲೆಯಲ್ಲಿ ಮದುವೆ ನೆರವೇರಿದೆ. ಈ ಸಂಭ್ರಮಕ್ಕೆ ಇಡೀ ಬಾಲಿವುಡ್ ಚಿತ್ರರಂಗವೇ ಸಾಕ್ಷಿಯಾಗಿದೆ. ಇದನ್ನೂ ಓದಿ: ಚಿತ್ರರಂಗ ನನ್ನ ಸ್ವತ್ತಲ್ಲ, ಕೆಸಿಸಿಗೆ ಎಲ್ಲರಿಗೂ ಆಹ್ವಾನವಿದೆ: ಕಿಚ್ಚ ಸುದೀಪ್
Advertisement
View this post on Instagram
Advertisement
ಇನ್ನೂ ಕ್ರೀಮ್ ಬಣ್ಣದ ಲೆಹೆಂಗಾದಲ್ಲಿ ಅಥಿಯಾ ಮಿಂಚಿದ್ರೆ, ಬಳಿ ಬಣ್ಣದ ಕುರ್ತಾದಲ್ಲಿ ರಾಹುಲ್ ಧರಿಸಿದ್ದಾರೆ. ಹಲವು ವರ್ಷಗಳ ಪ್ರೀತಿಯನ್ನ ಮದುವೆಯೆಂಬ ಬಂಧದ ಮೂಲಕ ಈ ಜೋಡಿ ಸಂಭ್ರಮಿಸಿದ್ದಾರೆ. ಅದ್ದೂರಿಯಾಗಿ ಈ ಜೋಡಿಯ ಮದುವೆ ನಡೆದಿದೆ. ಇದನ್ನೂ ಓದಿ: ಅಥಿಯಾ- ಕೆ.ಎಲ್ ರಾಹುಲ್ ಮದುವೆ: ಅಫಿಷಿಯಲ್ ಆಗಿ ಮಾವ ಆಗಿದ್ದೇನೆ ಎಂದ ಸುನೀಲ್ ಶೆಟ್ಟಿ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k