ಬಾಲಿವುಡ್‌ನ ಜೋಡಿ ಹಕ್ಕಿಗಳು ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟಿಗ ಕೆ.ಎಲ್ ರಾಹುಲ್ ಸರ್ಜರಿಗಾಗಿ ಅಥಿಯಾ ಶೆಟ್ಟಿ ಜತೆ ಜರ್ಮನಿಗೆ ಹಾರಿದ್ದಾರೆ. ಸದ್ಯ ಏರ್‌ಪೋರ್ಟ್‌ಗೆ ಆಗಮಿಸಿರುವ ವಿಡಿಯೋ ವೈರಲ್ ಆಗಿದೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೊತೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಡೇಟಿಂಗ್‌ನಲ್ಲಿದ್ದಾರೆ. ಇವರೆಗೂ ಈ ಕುರಿತು ಯಾವುದೇ ಅಧಿಕೃತ ವಿಚಾರ ಹೊರಬಿದ್ದಿಲ್ಲ. ಇದೀಗ ಈ ಬೆನ್ನಲ್ಲೇ ಕೆ.ಎಲ್ ರಾಹುಲ್ ಶಸ್ತ್ರ ಚಿಕಿತ್ಸೆಗಾಗಿ ಈ ಜೋಡಿ ಜರ್ಮನಿಯತ್ತ ಮುಖ ಮಾಡಿದ್ದಾರೆ. ಈ ವೇಳೆ ಏರಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು, ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್‌ಗೆ ವಿಶೇಷ ಉಡುಗೊರೆ ನೀಡಿದ ಕಪಿಲ್ ದೇವ್
View this post on Instagram
ಅಥಿಯಾ ಮತ್ತು ರಾಹುಲ್ ಜರ್ಮನಿಗೆ ತೆರಳುತ್ತಿದ್ದಾರೆ. ತನ್ನ ತೊಡೆಯ ಸಂದು ಗಾಯಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಗಾಯದ ಸಮಸ್ಯೆಯಿಂದ ಕೆ.ಎಲ್ ಕ್ರಿಕೆಟ್‌ಗೂ ಕೊಂಚ ಬ್ರೇಕ್ ಕೊಟ್ಟು, ಆರೋಗ್ಯದ ಕಡೆ ಗಮನ ಹರಸುತ್ತಿದ್ದಾರೆ. ಇನ್ನು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ರಾಹುಲ್ ಆರೈಕೆಗಾಗಿ, ಅಥಿಯಾ ಕೂಡ ಜರ್ಮನಿಯಲ್ಲೇ ಇದ್ದು, ರಾಹುಲ್ ಅವರನ್ನು ನೋಡಿಕೊಳ್ಳಲಿದ್ದಾರೆ.
Live Tv