ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ವಿಚಾರ ಕಳೆದ ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕ್ರಿಕೆಟಿಗ ರಾಹುಲ್ (K.l Rahul) ಬಹುಕಾಲದ ಗೆಳತಿ ಅಥಿಯಾ ಶೆಟ್ಟಿ (Athiya Shetty) ಜೊತೆ ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಮದುವೆ ದಿನಾಂಕ ಬದಲಾಗಿದೆ. ಪಕ್ಕಾ ಡೇಟ್ ಫಿಕ್ಸ್ ಆಗಿದೆ.
ಬಾಲಿವುಡ್ (Bollywood) ನಟ ಸುನೀಲ್ ಶೆಟ್ಟಿ (Suniel shetty) ಪುತ್ರಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ ತಮ್ಮ ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಮದುವೆ ಎಂಬ ಸುದ್ದಿ ಸದ್ದು ಮಾಡಿತ್ತು. ಆದರೆ ಈಗ 2023 ಜನವರಿಯಲ್ಲಿ ಇಬ್ಬರೂ ಹಸೆಮಣೆ ಏರುತ್ತಿರುವುದು ಕನ್ಫರ್ಮ್ ಎನ್ನುತ್ತಿವೆ ಮೂಲಗಳು. ಜನವರಿ 23ಕ್ಕೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸುನೀಲ್ ಶೆಟ್ಟಿ ಮತ್ತು ರಾಹುಲ್ ಕುಟುಂಬ ಸದ್ಯ ಮದುವೆ ದಿನಾಂಕ ಅಂತಿಮ ಗೊಳಿಸಿದೆ. ಇದನ್ನೂ ಓದಿ: ಸಂದೀಪ್ ಕಿಶನ್ ಜೊತೆ ʻಸೂರ್ಯಕಾಂತಿʼ ನಟಿ ರೆಗಿನಾ ಡೇಟಿಂಗ್
ಜನವರಿ 21ರಿಂದ ಇಬ್ಬರ ಮದುವೆ ಸಮಾರಂಭ ಪ್ರಾರಂಭವಾಗುತ್ತಿದೆ. ಮೂರು ದಿನಗಳು ನಡೆಯುವ ಅದ್ದೂರಿ ಮದುವೆ ಸಮಾರಂಭದಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ರಾಹುಲ್ ಮತ್ತು ಅಥಿಯಾ ಜೋಡಿ ಈ ತಿಂಗಳ ಕೊನೆಯಲ್ಲಿ ಎಲ್ಲರಿಗೂ ಆಹ್ವಾನ ನೀಡಲು ಪ್ರಾರಂಭಿಸಿದ್ದಾರೆ. ಆಪ್ತರಿಗೆ ಮದುವೆ ಡೇಟ್ ಬಹಿರಂಗಪಡಿಸದಂತೆ ಕೇಳಿಕೊಂಡಿದ್ದಾರಂತೆ. ಮದುವೆ ಕೆಲವೇ ದಿನಗಳು ಮಾತ್ರ ಬಾಕಿ ಇರುವ ಕಾರಣ ಈಗಾಗಲೇ ಸಿದ್ಧತೆ ಜೋರಾಗಿ ನಡೆಯುತ್ತಿದೆ.
ಹೊಸ ವರ್ಷ ಜ.21ರಿಂದ ಮದುವೆ ಶಾಸ್ತ್ರಗಳು ಪ್ರಾರಂಭವಾಗಲಿದೆ, ಮೆಹಂದಿ, ಹಳದಿ, ಸಂಗೀತ ಸಮಾರಂಭ ಸೇರಿದ್ದಂತೆ ಎಲ್ಲಾ ಶಾಸ್ತ್ರಗಳನ್ನು ಸಂಪ್ರದಾಯ ಬದ್ಧವಾಗಿ ಮದುವೆ ಕಾರ್ಯ ಮಾಡಲು ಎರಡು ಕುಟುಂಬಗಳು ನಿರ್ಧರಿಸಿದೆ. ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಪಕ್ಕ ದಕ್ಷಿಣ ಭಾರತದ ಶೈಲಿಯಲ್ಲಿ ನಡೆಸಲು ಎರಡು ಕುಟುಂಬ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ವಿಶೇಷ ಎಂದರೆ ಇಬ್ಬರ ಮದುವೆ ಯಾವುದೇ ಖಾಸಗಿ ಹೋಟೆಲ್ ಅಥವಾ ವಿದೇಶದಲ್ಲಿ ನಡೆಯುತ್ತಿಲ್ಲ. ಸುನೀಲ್ ಶೆಟ್ಟಿ ಅವರ ಖಂಡಾಲ ಬಂಗಲೆ ಜಹಾನ್‌ನಲ್ಲೇ ಜ.23ಕ್ಕೆ ಮದುವೆ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ.