ಬೆಳಗಾವಿ: ನಗರದ ಅಥಣಿ ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜೀವದ ಹಂಗು ತೊರೆದು ಚರಂಡಿಗಳಿಗೆ ಇಳಿದು ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.
Advertisement
ಯಾವುದೇ ಸೇಫ್ಟಿ ಕಿಟ್ ಇಲ್ಲದೆ ಪೌರ ಕಾರ್ಮಿಕರು ಚರಂಡಿಗಳಲ್ಲಿ ಇಳಿದು ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಹಲವು ಚರಂಡಿಗಳಲ್ಲಿ ಸಿಬ್ಬಂದಿ ಸಾವನ್ನಪ್ಪಿದ್ದರೂ ಅಥಣಿ ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳ ಎಚ್ಚೆತ್ತುಕೊಂಡಿಲ್ಲ. ಅಧಿಕಾರಿಗಳ ಅಚಾತುರ್ಯದಿಂದ ಜೀವದ ಹಂಗು ತೊರೆದು ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಹರ್ಷನ ಹತ್ಯೆ- ಡೀಟೈಲ್ಸ್ ಎಲ್ಲ ಹೇಳೋಕೆ ಆಗಲ್ಲ: ಆರಗ ಜ್ಞಾನೇಂದ್ರ
Advertisement
Advertisement
ನೌಕರಿ ಖಾಯಂ ಆಸೆಗೆ ಬಿದ್ದು ಜೀವದ ಹಂಗು ತೊರೆದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹ್ಯಾಂಡ್ ಗ್ಲೌಜ್, ಗಮ್ ಶೂಜ್, ಮಾಸ್ಕ್ ಏನೂ ಇಲ್ಲದೆ ಚರಂಡಿಯ ಆಳಕ್ಕೆ ಇಳಿದು ಪುರಸಭೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ. ಮಾನವೀಯತೆ ಮರೆತ ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.