ಬೆಂಗಳೂರು: ಅಟಲ್‌ಜೀ ಅವರ ಸಂಘಟನೆ, ಹೋರಾಟ ಇವೆಲ್ಲವೂ ಇವತ್ತಿನ ಕಾರ್ಯಕರ್ತರಿಗೆ ಪ್ರೇರಣಾಶಕ್ತಿಯಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B S Yediyurappa) ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಪ್ರಮುಖರು ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಮಾತನಾಡಿದ ಅವರು, ವಾಜಪೇಯಿ ಅವರು ಕರ್ನಾಟಕಕ್ಕೆ ಬಂದ ಸಂದರ್ಭದಲ್ಲಿ ಅವರ ಜೊತೆಯಲ್ಲಿ ಹಲವು ಬಾರಿ ಪ್ರವಾಸವನ್ನು ಮಾಡಿದ್ದೇನೆ. ಸಂಘಟನೆಯನ್ನು ಬಲಪಡಿಸಲು ಅವರು ಹಲವಾರು ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದರು ಎಂದು ಹಳೆ ಕ್ಷಣವನ್ನು ಮೆಲುಕು ಹಾಕಿದರು. ಇದನ್ನೂ ಓದಿ: 43 ಬಾಲ್‌ಗೆ 81 ರನ್ ಚಚ್ಚಿದ ಎಲ್ಲಿಸ್ ಪೆರ್ರಿ – ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ
Advertisement
Advertisement
ವಾಜಪೇಯಿಯವರ 100ನೇ ಜನ್ಮದಿನದ ಸಂದರ್ಭದಲ್ಲಿ ಅವರ ವಿಚಾರಧಾರೆಗಳನ್ನು ನಮ್ಮ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕೆಂಬ ಬಯಕೆ ನನ್ನದಾಗಿದೆ ಎಂದು ನುಡಿದರು. ಇದನ್ನೂ ಓದಿ: ಟೋಲ್ ಗೇಟ್ ತಪ್ಪಿಸಲು ಹೋಗಿ ಟೋಲ್ ಸಿಬ್ಬಂದಿಗೆ ಗುದ್ದಿಸಿ ಪಿಕಪ್ ವಾಹನ ಚಾಲಕ ಎಸ್ಕೇಪ್
Advertisement
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಬಿ.ಎಸ್.ಯಡಿಯೂರಪ್ಪ ಅವರಿಗೆ ಗೌರವ ಸಮರ್ಪಣೆ ಮಾಡಿದರು. ಇದನ್ನೂ ಓದಿ: ಬೆಂಗಳೂರಿನ ರಸ್ತೆ ಗುಂಡಿಗಳೂ ಸೊನ್ನೆ, ಅಭಿವೃದ್ಧಿಯೂ ಸೊನ್ನೆ: ಆರ್.ಅಶೋಕ್ ಟೀಕೆ
Advertisement
ಅಟಲ್ ಜೀ ಶತಮಾನೋತ್ಸವ ಅಭಿಯಾನದ ರಾಜ್ಯ ಪ್ರಮುಖ ಡಾ.ಶಿವಯೋಗಿ ಸ್ವಾಮಿ, ರಾಜ್ಯ ಸಂಚಾಲಕ ಜಗದೀಶ ಹಿರೇಮನಿ, ಜಿಲ್ಲಾ ಅಧ್ಯಕ್ಷ ಎಸ್.ಹರೀಶ್, ರಾಜ್ಯ ಸಮಿತಿ ಸದಸ್ಯ ಸದಾಶಿವ, ಮಮತಾ ಉದಯ್ ಉಪಸ್ಥಿತರಿದ್ದರು. ಇದನ್ನೂ ಓದಿ: ಭಾರತದತ್ತ ಯುರೋಪಿಯನ್ ರಾಷ್ಟ್ರಗಳ ಹೆಜ್ಜೆ – ತಿಂಗಳಾಂತ್ಯಕ್ಕೆ 27 ರಾಷ್ಟ್ರಗಳ ಆಯುಕ್ತರ ತಂಡ ಭೇಟಿ