ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೂ ಕರ್ನಾಟಕಕ್ಕೂ ಬಿಡಿಸಲಾಗದ ನಂಟು. ಕರುನಾಡಿನ ತುಂಬಾ ಮಂದಿ ಅಟಲ್‍ಜಿ ಒಡನಾಡಿಗಳಾಗಿದ್ರು. ಡಿ ಹೆಚ್ ಶಂಕರಮೂರ್ತಿ, ದಿವಂಗತ ನಾಯಕ ವಿಎಸ್ ಆಚಾರ್ಯ, ಆರ್‍ಎಸ್‍ಎಸ್‍ನ ಕೆ ನರಹರಿ ಅವರೊಂದಿಗೆ ಆಪ್ತ ಒಡನಾಟ ಹೊಂದಿದ್ರು.
ನವ ಭಾರತದ ಹರಿಕಾರ, ಛಲವಾದಿ ಅಟಲ್ ಬಿಹಾರಿ ವಾಜಪೇಯಿ ಇನ್ನು ನೆನಪು ಮಾತ್ರ. ಅವರು ಇಲ್ಲ ಅಂದ್ರ ಅವರ ನೆನಪುಗಳು ಎದೆಂದು ಅಜರಾಮರ. ಅಟಜೀ ಅವರು ಕರ್ನಾಟಕದೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು. ಅಟಲ್‍ಜಿ 1977ರಲ್ಲಿ ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದಾಗ ಪ್ರೋಟೋಕಾಲ್ ಮುಗಿದ ಕೂಡಲೇ ಶಂಕರಮೂರ್ತಿ ಕಹಾ ಹೈ ಎಂದಿದ್ದರಂತೆ. ಮೂಲೆಯಲ್ಲಿ ನಿಂತಿದ್ದ ಶಂಕರಮೂರ್ತಿ ಎದುರಿಗೆ ಬಂದಾಗ ಅಟಲ್‍ಜಿ ಸೀದಾ ಹೆಗಲ ಮೇಲೆ ಕೈ, ಎಲ್ಲಿ ನಿನ್ನ ಕಾರು..? ನಡಿ ನಿನ್ನ ಮನೆಗೆ ಎಂದು ಶಂಕರಮೂರ್ತಿಯನ್ನು ಉದ್ದೇಶಿಸಿ ವಾಜಪೇಯಿ ಮಾತನಾಡಿದ್ರು.
Advertisement
ಒಂದೇ ಚಪಾತಿ ಹಂಚಿಕೊಂದ್ದರು:
1983 ಚುನಾವಣೆ ಸಮಯದಲ್ಲಿ ವಾಜಪೇಯಿ, ಶಂಕರಮೂರ್ತಿ ಒಟ್ಟೊಟ್ಟಿಗೆ ಪ್ರಚಾರ ಮಾಡಿದ್ದರು. ಬೆಳಗಾವಿಯಲ್ಲಿ ಪ್ರಚಾರ ವೇಳೆ ಇಬ್ಬರಿಗೂ ಹೊಟ್ಟೆ ಹಸಿವಾಗಿತ್ತು. ಆದ್ರೆ ಒಂದೇ ಚಪಾತಿ ಇತ್ತು. ಚಪಾತಿಯ ಒಂದು ತುಂಡು ಸವಿದ ಅಟಲ್‍ಜಿ, ಕೂಡಲೇ ನಿನ್ನ ಗತಿಯೇನು..? ತಿಂದೆಯಾ ಅಂತಾ ಶಂಕರಮೂರ್ತಿಯನ್ನು ಪ್ರಶ್ನಿಸಿದ್ದರು. ಇಲ್ಲ ಎಂದ ತಕ್ಷಣ ಚಪಾತಿಯ `ಆ ಕಡೆ ನೀನು ತಿನ್ನು.. ಈ ಕಡೆ ನಾನು ತಿನ್ನುತ್ತಾ ಬರುವೆ’ ಅಂತ ಶಂಕರಮೂರ್ತಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
Advertisement
Advertisement
ಭದ್ರಾವತಿಗೆ ಬಂದಿದ್ದರು ಅಟಲ್ ಜೀ:
ಇಂದಿರಾ ಹತ್ಯೆ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದ ಸಂದರ್ಭದಲ್ಲಿ ವಾಜಪೇಯಿ ಸೋಲು ಅರಗಿಸಿಕೊಳ್ಳದ ಭದ್ರಾವತಿಯ ಲಕ್ಷ್ಮಿನಾರಾಯಣ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ರು. ವಿಚಾರ ತಿಳಿದ ಕೂಡಲೇ ವಾಜಪೇಯಿ ಭದ್ರಾವತಿಗೆ ಬಂದು, ಲಕ್ಷ್ಮಿನಾರಾಯಣ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ, ತಂಗಿ ತಮ್ಮನ ಓದಿಗೂ ನೆರವು ನೀಡಿದ್ದರಂತೆ. ಅಲ್ಲದೇ ರಾಜ್ಯ ಬಿಜೆಪಿ ನಾಯಕರ ಕಣ್ಣೀರು ಕಂಡು ವಾಜಪೇಯಿ ನ ದೈನ್ಯಂ ನ ಪಲಾಯನಂ ಎಂದಿದ್ದರು.
Advertisement
ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದ ವಾಜಪೇಯಿಗೆ ಜ್ವರ ಬಂದು ಮಲಗಿದ್ದಾಗ, ವಿಎಸ್ ಆಚಾರ್ಯರು ವಾಜಪೇಯಿ ಚಹಾ ಹಿಡಿದ ಕೊಡಲೇ ಎದ್ದು ಕುಳಿತ್ತದ್ದರಂತೆ. ಅಲ್ಲದೇ ವಿಎಸ್ ಆಚಾರ್ಯರ ಸಣ್ಣ ಕೆಂಪು ಕಾರಿನಲ್ಲಿ ಕುಳಿತುಕೊಳ್ಳಲಾಗದೇ ವಾಜಪೇಯಿ ಕೆಳಗೆ ಇಳಿದಿದ್ದರು. ಅಟಲ್‍ಜೀ ಬೆಂಗಳೂರಿಗೆ ಬಂದಾಗ ಆಪ್ತ ಆರ್‍ಎಸ್‍ಎಸ್‍ನ ಕೆ.ನರಹರಿ ಮನೆಗೆ ನೇರವಾಗಿ ತೆರಳುತ್ತಿದ್ರಂತೆ. ಕೆ.ನರಹರಿ ತಾಯಿಯ ಅಡುಗೆ ಕೈ ರುಚಿಗೆ ವಾಜಪೇಯಿ ಮಾರು ಹೋಗಿದ್ದಲ್ಲದೇ, ರೋಟಿ ಮಾಡಿಸಿಕೊಂಡು ತಿಂದು ಬರುತ್ತಿದ್ದರು.
1994ರ ಚುನಾವಣೆಯಲ್ಲಿ ಹುಣಸೂರಿನಿಂದ ಸಿ ಹೆಚ್ ವಿಜಯಶಂಕರ್ ಸ್ಪರ್ಧೆ ಮಾಡಿದ್ದರು. ವಿಜಯಶಂಕರ್ ಪರ ಪ್ರಚಾರಕ್ಕೆ ಬಂದಿದ್ದ ವಾಜಪೇಯಿ ಇಷ್ಟು ದಿನ ಶಂಕರ ಮಾತ್ರ ನಮ್ಮೊಂದಿಗೆ ಇದ್ದ.. ಈಗ ವಿಜಯ ಸೇರಿಕೊಳ್ಳಲಿದೆ ಎಂದಿದ್ದರು. ದೆಹಲಿಯಲ್ಲಿ ಭೇಟಿ ಮಾಡಿದಾಗ ಮಹಾರಾಜನನ್ನ ಸೋಲಿಸಿದ್ದು ನೀವೇನಾ ಎಂದು ಪ್ರಶ್ನಿಸಿದ್ದರು ಎಂಬಂತಹ ಮಾಹಿತಿಗಳು ತಿಳಿದುಬಂದಿದೆ. ಒಟ್ಟಿನಲ್ಲಿ ಅಜಾತಶತ್ರು, ಮಹಾನ್ ನಾಯಕನನ್ನು ಕಳೆದುಕೊಂಡ ದೇಶವೇ ಕಂಬನಿ ಮಿಡಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv