1971ರಲ್ಲಿ ಅಟಲ್ ಅವರು ಸಂಸತ್ ಸದಸ್ಯರಾಗಿದ್ದರು. ಗ್ವಾಲಿಯರ್ ಗೆ ಆಗಮಿಸಿದಾದ ರೈಲು ನಿಲ್ದಾಣದಿಂದ ನೇರವಾಗಿ ಟಾಂಗಾದಲ್ಲಿ ಮನೆಗೆ ಹೋದರು. ಗ್ವಾಲಿಯರ್ ನಲ್ಲಿ ಸ್ನೇಹಿತರ ಮತ್ತು ಸಹೋದರಿ ಮನೆಗೆ ಹೋಗಲು ತನ್ನ ಮನೆಯಲ್ಲಿ ಅಣ್ಣನಾದ ಪ್ರೇಮ ಬಿಹಾರಿ ಅವರ ಸೈಕಲ್ಲೊಂದಿತ್ತು. ಅದನ್ನೇರಿ ಸಹೋದರಿ ಮನಗೆ ಹೊರಟೇ ಬಿಟ್ಟರು. ಮಾರ್ಗ ಮಧ್ಯದಲ್ಲಿ ಗ್ವಾಲಿಯರ್ ಸಂಸ್ಥಾನದ ರಾಜಮಾತಾ ವಿಜಯ ರಾಜೇ ಸಿಂಧಿಯಾ ಅಟಲ್ ಜೀ ಸೈಕಲ್ ತುಳಿಯುತ್ತಾ ಹೋಗುವುದನ್ನು ಗಮನಿಸಿದರು.
ತಮ್ಮ ಸಹಾಯಕನನ್ನು ಕಳುಹಿಸಿ ಅಟಲ್ ಅವರನ್ನು ಒಂದು ಕ್ಷಣ ನಿಲ್ಲುವಂತೆ ತಿಳಿಸಿದ್ದರು. ಏನಿದು ಅವಸ್ಥೆ. ನೀವು ಮೊದಲೇ ತಿಳಿಸಿದರೆ ನಾನು ಕಾರನ್ನು ಕಳುಸುತ್ತಿದ್ದೆ ಎಂದರು ರಾಜಮಾತಾ. ಅದಕ್ಕೆ ಉತ್ತರಿಸಿದ ಅಟಲ್ ಅವರು ಹೇಳಿದರು, ಪರವಾಗಿಲ್ಲ ನನಗೇನೂ ತೊಂದರೆ ಇಲ್ಲ. ಗ್ವಾಲಿಯರ್ ನ ಜನತೆಗೆ ನಾನು ಯಾರೆಂದು ಗೊತ್ತು, ಅವರನ್ನು ನಾನು ಬಲ್ಲೆ. ರಾಜಮಾತಾ ಅವರನ್ನು ಅಭಿನಂದಿಸಿ ಅಟಲ್ ಸೈಕಲ್ ಸವಾರನಾಗಿ ನಡೆದರು.
Advertisement
Advertisement
ಅಷ್ಟೊಂದು ಸರಳ ಸ್ವಭಾವದ ವ್ಯಕ್ತಿಯಾಗಿದ್ದವರು ಇವರು. ವ್ಯಕ್ತಿ ಎಷ್ಟೇ ಉನ್ನತ ಶಿಖರಕ್ಕೇರಿದರೂ, ತನ್ನ ಮೂಲದ ಕಲ್ಪನೆ ಹೊಂದಿರಬೇಕು. ಅಂತವರು ಮಾತ್ರ ಎಂಥ ಸಮಸ್ಯೆಗಳನ್ನೂ ಎದುರಿಸಬಲ್ಲರು ಎಂಬುದನ್ನು ತಿಳಿಸಿ ಕೊಡುತ್ತದೆ ಅವರ ವ್ಯಕ್ತಿತ್ವ. ದೇಶದ ಬಡತನ, ಅಭಿವೃದ್ಧಿಯನ್ನು ಅರಿಯಬೇಕಾದರೆ ಎಲ್ಲಾ ರಾಜಕಾರಣಿಗಳು ಎಸಿ ಕಾರುಗಳನ್ನು ಬಿಟ್ಟು ಸೈಕಲ್ ನಡೆಸಬೇಕು. ಆಗ ನಿಜವಾಗಿಯೂ ಸಾಮಾನ್ಯ ಜನರ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಾಜಪೇಯಿ ಅವರು ಸೈಕಲ್ ನಡೆಸುವುದರೊಂದಿಗೆ ಕನಸಿನ ಭಾರತದ ಚಿಂತನೆಯ ಪೆಡಲ್‍ಗಳನ್ನು ತುಳಿಯುತ್ತಾ ಮುಂದೆ ಸಾಗಿ ಬಂದವರಾಗಿದ್ದಾರೆ.
Advertisement
(ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)
Advertisement