Connect with us

Latest

ಜನ್ಮದಿನದ ಅಂಗವಾಗಿ ‘ಸದೈವ ಅಟಲ್’ ಸ್ಮಾರಕ ಅನಾವರಣ

Published

on

– ದೇಶದ ಅತೀ ದೊಡ್ಡ ರೈಲು ಮಾರ್ಗ ಲೋಕಾರ್ಪಣೆ

ನವದೆಹಲಿ: ಇಂದು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನ ಪ್ರಯುಕ್ತ ದೇಶದ ರಾಜಧಾನಿಯಲ್ಲಿ ನಿರ್ಮಾಣ ಮಾಡಲಾಗಿರುವ ‘ಸದೈವ ಅಟಲ್’ ಸ್ಮಾರಕವನ್ನು ಇಂದು ಅನಾವರಣ ಮಾಡಲಾಗುವುದು.

ರಾಷ್ಟ್ರಪತಿ ರಮಾನಾಥ್ ಕೋವಿಂದ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣವಾಗಿದ್ದು, ದೇಶದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಒಂದೂವರೆ ಎಕರೆ ಜಾಗದಲ್ಲಿ 10.51 ಕೋಟಿ ರೂ.ಗಳಲ್ಲಿ ಸದೈವ ಅಟಲ್ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಅಟಲ್ ಜೀ ಅವರ ಆದರ್ಶ, ವಿಚಾರಗಳು ಹಲವರಿಗೆ ಮಾದರಿಯಾಗಿವೆ. ಹಾಗಾಗಿ ಅಂತಹ ಮಹಾನ್ ವ್ಯಕ್ತಿಗೆ ಗೌರವ ಸಲ್ಲಿಸುವುದಕ್ಕಾಗಿ ಸ್ಮಾರಕ ನಿರ್ಮಾಣ ಮಾಡಲಾಗಿದೆ ಎಂದು ಕರ್ತವ್ಯನಿರತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಉತ್ತಮ ರಾಜಕಾರಿಣಿ ಆಗೋದರ ಜೊತೆಗೆ ಓರ್ವ ಕವಿ ಸಹ ಆಗಿದ್ದರು. ಸ್ಮಾರಕದ ಗೋಡೆಯ ಮೇಲೆ ಅಟಲ್ ಜೀ ಅವರ ಕವಿತೆಯ ಸಾಲುಗಳನ್ನು ಬರೆಯಲಾಗಿದೆ. ಸದೈವ ಅಟಲ್ ಸ್ಮಾರಕ ನಿರ್ಮಾಣಕ್ಕಾಗಿ ಸ್ಥಳದಲ್ಲಿ ಯಾವ ಮರವನ್ನು ಕಡಿಯಲಾಗಿಲ್ಲ ಎಂಬುದು ಮತ್ತೊಂದು ಈ ಸ್ಥಳದ ವಿಶೇಷವಾಗಿದೆ.

ದೇಶದ ಅತಿದೊಡ್ಡ ರೈಲು, ರಸ್ತೆ ಮಾರ್ಗದ ಸೇತುವೆ ಬೋಗಿಬೇಲ್‍ನ್ನು ಸುಮಾರು 21 ವರ್ಷಗಳ ಬಳಿಕ ಇಂದು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. 1997ರಲ್ಲಿ ಪ್ರಧಾನಿ ಎಚ್.ಡಿ. ದೇವೇಗೌಡ ಶಂಕುಸ್ಥಾಪನೆ ಮಾಡಿದ್ದ ಈ ಯೋಜನೆಯ ಕಾಮಗಾರಿಗೆ 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಚಾಲನೆ ನೀಡಿದ್ದರು. ಇದನ್ನೂ ಓದಿ: ಎಚ್‍ಡಿಡಿ ಶಂಕುಸ್ಥಾಪನೆಗೈದಿದ್ದ ದೇಶದ ಉದ್ದದ ರೈಲು, ಸೇತುವೆ– 32 ಮೀಟರ್ ಎತ್ತರದಲ್ಲಿ ಬ್ರಹ್ಮಪುತ್ರಾ ನದಿಯಲ್ಲಿ ನಿರ್ಮಾಣ– 37 ಗಂಟೆಯ ದೂರ ಇನ್ನು 3 ಗಂಟೆಯಲ್ಲಿ ಕ್ರಮಿಸಬಹುದು

ವಾಜಪೇಯಿ ಅವರ 94ನೇ ಜಯಂತಿ ಸ್ಮರಣಾರ್ಥ 100 ರೂಪಾಯಿ ನಾಣ್ಯವನ್ನು ಸೋಮವಾರ ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ. 35 ಗ್ರಾಂ ತೂಕದ ನಾಣ್ಯದಲ್ಲಿ ಅಟಲ್ ಜೀ ಭಾವಚಿತ್ರ, ಹಿಂದಿ – ಇಂಗ್ಲೀಷ್‍ನಲ್ಲಿ ಹೆಸರು, ಮರಣ – ಜನನ ವರ್ಷ ಮುದ್ರಿಸಲಾಗಿದೆ. ಮತ್ತೊಂದು ಕಡೆ ಅಶೋಕ ಲಾಂಛನ, ಸತ್ಯಮೇವ ಜಯತೆ ಮತ್ತು 100 ಅಂತಾ ಮುದ್ರಿಸಲಾಗಿದೆ. ಇದು ದೈನಂದಿನ ಚಲಾವಣೆಗೆ ಇರಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *