ನವದೆಹಲಿ: ಅಜಾತಶತ್ರು, ಮಾಜಿ ಪ್ರಧಾನಿ ವಾಜಪೇಯಿ ಅಗಲಿಕೆಯೊಂದಿಗೆ ದೇಶದಲ್ಲಿ ಒಂದು ಯುಗಾಂತ್ಯವಾಗಿದೆ. ಈ ಮಹಾನ್ ನಾಯಕನ ಅಂತಿಮ ದರ್ಶನಕ್ಕೆ ಇದೀಗ ಗಣ್ಯರ ದಂಡೇ ಹರಿದು ಬರ್ತಿದೆ.
ಬೆಳಗ್ಗೆ 9 ಗಂಟೆವರೆಗೆ ದೆಹಲಿಯ 6ಎ ಕೃಷ್ಣಮೆನನ್ ಮಾರ್ಗ್‍ನಲ್ಲಿರುವ ವಾಜಪೇಯಿ ನಿವಾಸದಲ್ಲಿಯೇ ದರ್ಶನಕ್ಕೆ ಇಡಲಾಗುತ್ತೆ. ಈ ವೇಳೆ ಬಂಧು ಮಿತ್ರರಿಗೆ ಮತ್ತು ಗಣ್ಯರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಂತರ 9 ಗಂಟೆಗೆ ಕೃಷ್ಣಮೆನನ್ ಮಾರ್ಗ್‍ನ ನಿವಾಸದಿಂದ ಪಾರ್ಥಿವ ಶರೀರದ ಮೆರವಣಿಗೆ ಹೊರಡಲಿದ್ದು, 5 ಕಿಲೋಮೀಟರ್ ದೂರದ ಬಿಜೆಪಿ ಮುಖ್ಯ ಕಚೇರಿಗೆ ತಲುಪಲಿದೆ.
Advertisement
Advertisement
ಅಲ್ಲಿ 2 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ. ಬಳಿಕ 9 ಕಿಲೋಮೀಟರ್ ದೂರದ ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ.
Advertisement
ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv