ಅಟಲ್‍ಜೀಯವರು ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ `ಪ್ರಚಾರಕ’ರಾಗಿ ನಿಂತರು. ಲಕ್ನೋ ಸಮೀಪದ ಶಾಂಡಿಲಾ ಶಾಖೆಯಲ್ಲಿ ಅವರು ಕಾರ್ಯಾರಂಭ ಮಾಡಿದರು. ಬೆಳಗಿನ ವೇಳೆಯಲ್ಲಿ `ಶಾಖೆ’ಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸುತ್ತಿದ್ದರು. ಮಧ್ಯಾಹ್ನದ ವೇಳೆಯಲ್ಲಿ ಕವನಗಳನ್ನು ರಚಿಸುತ್ತಿದ್ದರು. ಈ ಪ್ರಕಾರ ಸತತ ಒಂದು ವರ್ಷಕಾಲ ಸಂಘದ ಪ್ರಚಾರಕ್ಕಾಗಿ ಸೇವೆ ಸಲ್ಲಿಸಿದರು. ಆ ಬಳಿಕ ಅವರ ಗಮನ ಪತ್ರಿಕೋದ್ಯಮದತ್ತ ಹರಿಯಿತು.
ಪ್ರಾರಂಭದಲ್ಲಿ `ರಾಷ್ಟ್ರಧರ್ಮ’ ಎಂಬ ಮಾಸ ಪತ್ರಿಕೆಯನ್ನು ಪಂಡಿತ ದೀನದಯಾಳ್ ಉಪಾಧ್ಯಾಯರ ಜೊತೆಗೂಡಿ ಲಕ್ನೋದಲ್ಲಿ ಪ್ರಾರಭಿಸಿದ್ದರು. ಈ ಪತ್ರಿಕೆ ಪ್ರಾರಂಭವಾಗಿದ್ದು 1947ರಲ್ಲಿ. ಈ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. ಮುಂದೆ ಅಟಲ್‍ರವರ ಸಂಪಾದಕತ್ವದಲ್ಲಿ `ಪಾಂಚಜನ್ಯ’ ಎಂಬ ವಾರಪತ್ರಿಕೆ ಪ್ರಾರಂಭವಾಯಿತು. ಹೀಗೆ ಪತ್ರಿಕೋದ್ಯಮದಲ್ಲಿ ಸಾಕಷ್ಟು ಅನುಭವ ಪಡದ ನಂತರ ಅಟಲ್‍ರವರು `ಸ್ವದೇಶ’ ಮತ್ತು `ಅರ್ಜುನ್’ ಎಂಬ ಎರಡು ದೈನಿಕ ಪತ್ರಿಕೆಗಳ ಸಂಪಾದಕತ್ವದ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಅಟಲ್‍ಜೀ ಯವರ ಸಂಪಾದಕೀಯ ತುಂಬಾ ಹರಿತವಾಗಿರುತ್ತಿತ್ತು. ಓದುಗರ ಮನಸ್ಸಿನ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತಿತ್ತು ಎಂಬುದು ಆ ಕಾಲದ ವಾಚಕರ ಅನಿಸಿಕೆಯಾಗಿತ್ತು. ತೀಕ್ಷ್ಣ ಹಾಗೂ ನಿಖರವಾದ ಬರವಣಿಗೆ ಅವರದಾಗಿರುತ್ತಿತ್ತು.
Advertisement
Advertisement
ದಿನದ ಕಾರ್ಯ ಮುಗಿದ ನಂತರ ಏಕಾಂತದಲ್ಲಿ ಕುಳಿತು ಕೊಳ್ಳುವುದು ಅವರ ಸ್ವಭಾವ. ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಹರಟೆ ಹೊಡೆಯವುದು ಮತ್ತು ಸಂಜೆ ವೇಳೆಯಲ್ಲಿ ಒಳ್ಳೆಯ ಚಲನಚಿತ್ರ ನೋಡುವುದು ಅವರ ಹವ್ಯಾಸವಾಗಿತ್ತು. ಉತ್ತಮ ಚಲನಚಿತ್ರ ನೋಡುವುದು ಎಂದರೆ ಅವರಿಗೆ ಎಲ್ಲಿಲ್ಲದ ಪ್ರಾಣ. ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕಾರಂಗದ ಮೂಲಕ ಭಾರತೀಯರಲ್ಲಿ ರಾಷ್ಟ್ರೀಯತೆ, ಮೂಢನಂಬಿಕೆ, ಸಮಾಜದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಪತ್ರಕರ್ತರಾಗಿ ಜನಮನಕ್ಕೆ ಅರಿವು ತಲುಪಿಸಿದರು. ಮುಂದೆ ಪ್ರಧಾನಮಂತ್ರಿಯಾದಾಗ ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು.
Advertisement
(ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)
Advertisement
https://www.youtube.com/watch?v=c6bRPaIlo1s
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv