ನವದೆಹಲಿ: ಜೆಡಿಎಸ್ (JDS) ಮಾಜಿ ಶಾಸಕ ಎ.ಟಿ ರಾಮಸ್ವಾಮಿ (AT Ramaswamy) ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ. ದೆಹಲಿಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಸದಸ್ಯತ್ವ ರಸೀದಿ ನೀಡಿ, ಶಾಲು ಹೋದಿಸಿ ಪಕ್ಷಕ್ಕೆ ಅವರನ್ನು ಬರ ಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Singh Thakur) ಎ.ಟಿ ರಾಮಸ್ವಾಮಿ ಅವರು ಸರಿಯಾದ ನಿರ್ಧಾರ ತೆಗೆದುಕೊಂಡು ದೇಶದ ಅತಿದೊಡ್ಡ ಪಕ್ಷವನ್ನು ಸೇರಿದ್ದಾರೆ. ಅವರು ಸೇರ್ಪಡೆಯಿಂದ ಬಿಜೆಪಿಗೂ ಶಕ್ತಿ ಸಿಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಡಬಲ್ ಇಂಜಿನ್ ಸರ್ಕಾರದ ಸಾಧನೆ ಚುನಾವಣಾ ಫಲಿತಾಂಶದಲ್ಲಿ ತಿಳಿಯಲಿದೆ ಎಂದರು.
Advertisement
Advertisement
ಬಳಿಕ ಮಾತನಾಡಿದ ಎ.ಟಿ ರಾಮಸ್ವಾಮಿ, ಅತ್ಯಂತ ಸಂತೋಷದಿಂದ ಪಕ್ಷವನ್ನು ಸೇರಿದ್ದೇನೆ. ಇಂದು ಸಂಜೆ ಅಥವಾ ನಾಳೆ ಮೋದಿ, ಅಮಿತ್ ಶಾ, ನಡ್ಡಾ ಅವರನ್ನು ಭೇಟಿಯಾಗುತ್ತಿದ್ದೇನೆ. ಇಡೀ ವಿಶ್ವದಲ್ಲೇ ಭಾರತ ಪಗ್ರತಿಯಲ್ಲಿ ದಾಪುಗಾಲು ಹಾಕ್ತಿದೆ. ಬಿಜೆಪಿ ನಾಯಕರು ಮೌಲ್ಯಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: 10 ತಿಂಗಳ ನಂತ್ರ ನವಜೋತ್ ಸಿಂಗ್ ಸಿಧು ಜೈಲಿನಿಂದ ಬಿಡುಗಡೆ – ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ
Advertisement
Advertisement
ಹಿಂದೆ ನಾನು ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. 41,000 ಎಕರೆ ನಕಲಿ ದಾಖಲೆ ಸೃಷ್ಟಿ ಮಾಡಿ ಹಕ್ಕು ಸ್ಥಾಪಿಸಿದ್ದರು. ಹಣವಂತರು, ಪ್ರಭಾವಿಗಳು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದರು. ಇದಕ್ಕೆ ಸರ್ಕಾರಿ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಭೂಗಳ್ಳರ ಮಾಫಿಯ ಮತ್ತು ಹಣಬಲದ ಬಲಿಪಶು ನಾನು ಆದರೆ ಹೋರಾಟ ಮಾತ್ರ ನಿಲ್ಲಿಸಲ್ಲ ಎಂದು ಹೇಳಿದರು.
ಇನ್ನು ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಿ, ನಾನು ಶಾಸಕ ಸ್ಥಾನದ ಆಕ್ಷಾಂಕ್ಷಿಯಲ್ಲ, ಪಕ್ಷ ಅವಕಾಶ ಕೊಟ್ಟರೆ ಸಣ್ಣ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡುವೆ. ಜನ, ರಾಜ್ಯ, ದೇಶದ ಜನರ ಹಿತಾಸಕ್ತಿಗಾಗಿ ಕೆಲಸ ಮಾಡುವೆ. ವಿಧಾನಸಭೆಗಳು ಹಣದ ಧ್ವನಿಯಾಗುತ್ತಿವೆ. ಅವು ಬಡವರ ಪರ ಧ್ವನಿಯಾಗಬೇಕಾಗಿದೆ ಎಂದರು. ಇದನ್ನೂ ಓದಿ: ನಾರಾಯಣಗೌಡ ಕಾಲ ಮುಗಿದಿದೆ- ಕುತ್ತಿಗೆ ಕೊಯ್ದು ಹೋದವರು ಸರ್ಟಿಫಿಕೇಟ್ ಕೋಡೋದು ಬೇಡ: ಹೆಚ್‌ಡಿಕೆ