ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟುಹಬ್ಬವನ್ನು ಶನಿವಾರ ದೇಶಾದ್ಯಂತ ಅಭಿಮಾನಿಗಳು ಆಚರಿಸಿದ್ದಾರೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಧೋನಿ ಅಲ್ಲಿಯೇ ಪತ್ನಿ, ಪುತ್ರಿ ಹಾಗು ಇತರೆ ಆಟಗಾರರೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಅನುಷ್ಕಾ-ವಿರಾಟ್ ದಂಪತಿ ಜೊತೆಯಾಗಿ ಧೋನಿಗೆ ವಿಶ್ ಮಾಡಿದ್ದರು.
ಧೋನಿ ಹುಟ್ಟು ಹಬ್ಬದ ವೇಳೆ ಅನುಷ್ಕಾ ಪತಿ ವಿರಾಟ್ ಮೇಲೆ ಮುನಿಸಿಕೊಂಡರಾ ಎಂಬ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಈ ಪ್ರಶ್ನೆಗೆ ಕಾರಣ ವೈರಲ್ ಆಗಿರುವ ಫೋಟೋ. ಎಲ್ಲ ಅಭಿಮಾನಿಗಳು, ಸೆಲೆಬ್ರೆಟಿಗಳು, ಕ್ರಿಕೆಟಿಗರು ಸೇರಿದಂತೆ ಧೋನಿ ಕೇಕ್ ಮಾಡುತ್ತಿರುವ ಫೋಟೋ ಹಾಕಿಕೊಂಡು ತಮ್ಮ ನೆಚ್ಚಿನ ಆಟಗಾರನಿಗೆ ಶುಭ ಕೋರಿದ್ದರು. ಅರುಣ್ ಪಾಂಡೆ ಎಂಬವರು ಸಹ ಧೋನಿ ಕೇಕ್ ಮಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದರು. ಇದನ್ನು ಓದಿ: ಹುಟ್ಟುಹಬ್ಬದ ಸಂಭ್ರಮಕ್ಕೂ ಮುನ್ನ ಧೋನಿ ವಿಶೇಷ ಸಾಧನೆ
ಫೋಟೋದಲ್ಲಿ ಏನಿದೆ?: ಧೋನಿ ತನ್ನ ಗೆಳೆಯನಿಗೆ ಕೇಕ್ ತಿನ್ನಿಸುತ್ತಿರುವ ಫೋಟೋ ಇದಾಗಿದೆ. ಧೋನಿ ಹಿಂದೆ ಅನುಷ್ಕಾ ಮತ್ತು ವಿರಾಟ್ ಇಬ್ಬರು ಇರೋದನ್ನು ಗಮನಿಸಬಹುದು. ಆದ್ರೆ ಅನುಷ್ಕಾರ ಮುಖ ಭಾವನೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಇತ್ತ ಕೊಹ್ಲಿ ನಾನೇನು ಮಾಡಿಲ್ಲವೇ ಎಂಬಂತೆ ನಿಂತಿದ್ದಾರೆ.
ಒಟ್ಟಿನಲ್ಲಿ ಅನುಷ್ಕಾರ ಮುಖಭಾವ ಮಾತ್ರ ಟ್ರೋಲ್ ಆಗುತ್ತಿದ್ದು, ನೆಟ್ಟಿಗರು ಮಾತ್ರ ತಮಗೆ ತೋಚಿದ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಧೋನಿ ಕುರಿತ ಅಭಿಮಾನಿ ಕಮೆಂಟ್ ಗೆ ತಿರುಗೇಟು ಕೊಟ್ಟ ಸೆಹ್ವಾಗ್
ಎಂಎಸ್ ಧೋನಿ ತಮ್ಮ 37 ನೇ ಹುಟ್ಟುಹಬ್ಬದ ಸಂಭ್ರಮವನ್ನು ಪತ್ನಿ ಸಾಕ್ಷಿ ಹಾಗೂ ಪುತ್ರಿ ಜೀವಾ ಸೇರಿದಂತೆ ಟೀಂ ಇಂಡಿಯಾ ಕೆಲ ಆಟಗಾರರೊಂದಿಗೆ ಆಚರಣೆ ಮಾಡಿಕೊಂಡಿದ್ದು, ಹಲವು ಸ್ಟಾರ್ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಧೋನಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಪ್ರಮುಖವಾಗಿ ಟೀಂ ಇಂಡಿಯಾ ಮಾಜಿ ಆಟಗಾರರ ವಿರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್ ನಲ್ಲಿ ಧೋನಿ ಫೋಟೋ ಟ್ವೀಟ್ ಮಾಡಿ ಶುಭಕೋರಿದ್ದು ಎಲ್ಲರ ಗಮನ ಸೆಳೆದಿದೆ.
Tumhey aaur kya Doon mai dil ke sivaay, tumko hamaari umar lag jaaye pic.twitter.com/q3fBPt6WRw
— Arun Pandey (@ArunPandey99) July 7, 2018