ಮುಂಬೈ: ಬಿ-ಟೌನ್‍ನ ಕ್ಯೂಟ್ ಜೋಡಿಗಳಾದ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಂಪತಿ ತಮ್ಮ ಎರಡನೇ ಮಗುವಿನ ಆಗಮನವನ್ನು ಸ್ವಾಗತಿಸುವ ಸಂತಸದಲ್ಲಿದ್ದಾರೆ.
ಭಾನುವಾರದಂದು ಮೀರಾ ಅವರ ಎರಡನೇ ಸೀಮಂತ ಕಾರ್ಯಕ್ರಮ ನಡೆಯಿತು. ಶಾಹಿದ್ ಕಪೂರ್ ಮುದ್ದಿನ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಿಯ ಗೆಳೆಯರು ಹಾಗೂ ಕುಟುಂಬದವರೊಂದಿಗೆ ಸಂಭ್ರಮಿಸಿದರು. ಪಂಕಜ್ ಕಪೂರ್, ಜಾನ್ವಿ ಕಪೂರ್ ಹಾಗೂ ಇಶಾನ್ ಖಟ್ಟರ್ ಸೇರಿದಂತೆ ಹಲವರು ಸಂಭ್ರಮದಲ್ಲಿ ಭಾಗಿಯಾಗಿದ್ದರು
Advertisement
ಕಾರ್ಯಕ್ರಮದಲ್ಲಿ ಮೀರಾ ಆಫ್ ಶೋಲ್ಡರ್ ಪೋಲ್ಕಾ ಡಾಟ್ ಡ್ರೆಸ್ ಹಾಗೂ ಶಾಹಿದ್ ಕಪೂರ್ ಫ್ಲಾರಲ್ ಶರ್ಟ್ ಧರಿಸಿ ಕೂಲ್ ಆಗಿ ತಮ್ಮ ಖುಷಿಯನ್ನು ಸಂಭ್ರಮಿಸಿದರು.
Advertisement
Advertisement
ಶಾಹಿದ್ ಹಾಗೂ ಮೀರಾ ಅವರ ಪುತ್ರಿ ಮಿಶಾ ಕೈಯಲ್ಲಿ `ಹಿರಿಯ ಸಹೋದರಿ’ ಎಂದು ಬರೆದಿದ್ದ ಬಲೂನ್‍ನನ್ನು ಹಿಡಿದು ಪೋಸ್ ಕೊಟ್ಟಿರುವ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ದಂಪತಿ ಶೇರ್ ಮಾಡಿದ್ದಾರೆ. ಈ ಮೂಲಕ ದಂಪತಿಯು ತಮ್ಮ ಎರಡನೇ ಮಗುವಿನ ಆಗಮನದ ವಿಷಯವನ್ನು ಅಭಿಮಾನಿಗಳಿಗೆ ಹೊಸ ಬಗೆಯಲ್ಲಿ ತಿಳಿಸಿದ್ದಾರೆ.
Advertisement
ಶಾಹಿದ್ ಹಾಗೂ ಮೀರಾ 2015ರ ಜುಲೈ 7 ರಂದು ದೆಹಲಿಯಲ್ಲಿ ವಿವಾಹವಾಗಿದ್ದರು. 2016ರ ಆಗಸ್ಟ್ 26 ರಂದು ಅವರ ಮೊದಲ ಮಗವನ್ನು ದಂಪತಿ ಸ್ವಾಗತಿಸಿದ್ದರು. ಹಾಗೆಯೇ ಶಾಹಿದ್ ಹಾಗೂ ಮೀರಾ ಇಬ್ಬರ ಹೆಸರಿನ ಮೊದಲ ಅಕ್ಷರವನ್ನು ಜೋಡಿಸಿ ಅವರ ಮಗಳಿಗೆ ‘ಮಿಶಾ’ ಎಂದು ನಾಮಕರಣ ಮಾಡಿದ್ದರು.
https://www.instagram.com/p/BlR9pTeFZpS/?taken-by=shahidkapoor
https://www.instagram.com/p/BlQq31DleoD/?taken-by=bollywood