ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಪ್ರತಿನಿತ್ಯ ಹತ್ತಾರು ಗೋವುಗಳ ಕಳ್ಳತನವಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೆ ಪೊಲೀಸರು ಸೂಕ್ತ ಕ್ರಮ ಕೈಗೊಳುತ್ತಿಲ್ಲ. ಗೋವುಗಳನ್ನು ರಾತ್ರಿ ವೇಳೆ ಕದ್ದು ಕಸಾಯಿಖಾನೆಗೆ ಕೊಂಡೊಯ್ಯುವ ದೃಶ್ಯ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಹೌದು. ಮಂಗಳೂರಿನ ಮೂಡಬಿದ್ರೆಯ ಕೋಟೆ ಬಾಗಿಲು ಎಂಬಲ್ಲಿ ರಾತೋ ರಾತ್ರಿ 2 ಗೋವುಗಳನ್ನು ಕಾರಿನಲ್ಲಿ ಕದ್ದು ಕೊಂಡೊಯ್ಯುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೋಟೆಬಾಗಿಲಿನ ರಸ್ತೆ ಬದಿಯಲ್ಲಿ ಮಲಗಿದ್ದ ಗೋವನ್ನು ಇಬ್ಬರು ಕಳ್ಳರು ಕೈ ಕಾಲು ಕಟ್ಟುತ್ತಾರೆ. ನಂತರ ಇನ್ನಿಬ್ಬರು ಕಳ್ಳರು ಸ್ಕಾರ್ಪಿಯೋ ಕಾರಿನಲ್ಲಿ ಬಂದು ಕಾರಿನಲ್ಲಿ ಗೋವುಗಳನ್ನ ಎತ್ತಾಕ್ಕೊಂಡು ಪರಾರಿಯಾಗುತ್ತಾರೆ.
Advertisement
Advertisement
ಸೆಪ್ಟೆಂಬರ್ 28ರಂದು ಗೋ ಕಳ್ಳರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಸಿಸಿಟಿವಿ ಕ್ಯಾಮರಾ ವಿಡಿಯೋ ಸಮೇತ ಮೂಡಬಿದ್ರೆ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಅಸಡ್ಡೆ ತೋರಿದ್ದಾರೆ. ಕಸಾಯಿಖಾನೆಗೆ ಕೊಡೊಯ್ಯುವ ಗೋಹಂತಕರ ವಿರುದ್ಧ ಕ್ರಮ ಕೈಗೊಳ್ಳದೆಯಿರುವ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.