ನೆಲಮಂಗಲ: ರೈಲು ಹರಿದು 40 ಕ್ಕೂ ಹೆಚ್ಚು ಕುರಿಗಳು ದಾರುಣ ಸಾವನ್ನಪ್ಪಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಪೆಮ್ಮನಹಳ್ಳಿಯಲ್ಲಿ ನಡೆದಿದೆ.
ಶಿರಾ ಮೂಲದ ರೈತ ನಾಗರಾಜು ವಲಸೆ ಬಂದು ಕುರಿಗಳನ್ನು ಮೇಯಿಸುತ್ತಿದ್ದರು. ಮಳೆ ಜೋರಾದ ಸಮಯದಲ್ಲಿ ರೈಲ್ವೆ ಹಳಿ ಕಡೆ ಕುರಿ ಮಂದೆ ನುಗ್ಗಿದೆ. ಆಗ ಬೆಂಗಳೂರು ಮಾರ್ಗವಾಗಿ ತುಮಕೂರು ಕಡೆ ಪ್ರಯಾಣಿಸುತ್ತಿದ್ದ ರೈಲು ಕುರಿ ಮಂದೆ ಮೇಲೆ ರೈಲು ಹರಿದಿದೆ. ಇದನ್ನೂ ಓದಿ: ಇಬ್ಬರು ಬಾಲಕಿಯರ ರೇಪ್ – ಮೂವರು ಅಪ್ರಾಪ್ತರು ಸೇರಿ 6 ಮಂದಿ ಅರೆಸ್ಟ್
ರೈಲು ಹರಿದ ಪರಿಣಾಮವಾಗಿ 40 ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿವೆ. ಇದರಿಂದ ರೈತ ಕಂಗಾಲಾಗಿದ್ದಾನೆ. ರೈಲ್ವೆ ಅಧಿಕಾರಿಗಳು ಹಾಗೂ ಸ್ಥಳೀಯ ಜನರ ನಡುವೆ ವಾಕ್ ಸಮರ ನಡೆಯಿತು.
ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಎಣ್ಣೆ ಸಾಲ ಕೊಡದಿದ್ದಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ – ಆರೋಪಿ ಅರೆಸ್ಟ್