ಫ್ಲೋರಿಡಾ: ಕಳೆದ ವಾರವಷ್ಟೇ ಲೋಕಾರ್ಪಣೆಗೊಂಡಿದ್ದ ಪಾದಚಾರಿ ಸೇತುವೆ ಕುಸಿದು ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಫ್ಲೋರಿಡಾದ ಮಿಯಾಮಿ ವಿಶ್ವವಿದ್ಯಾಲಯದ ಬಳಿ ಗುರುವಾರದಂದು ನಡೆದಿದೆ. ಸೇತುವೆಯ ಅಡಿಯಲ್ಲಿ 8 ಕಾರುಗಳು ಹಾಗೂ ಇನ್ನೂ ಹಲವಾರು ಮಂದಿ ಸಿಲುಕಿದ್ದಾರೆಂದು ವರದಿಯಾಗಿದೆ.
ಸೇತುವೆಯ ಅಡಿಯಲ್ಲಿ ಸಿಲುಕಿ ಕಾರುಗಳು ಜಖಂಗೊಂಡಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗೆ ಸೇರಿಸಿಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
Advertisement
173 ಅಡಿ ಎತ್ತರವಿರುವ ಸೇತುವೆಯು ಫ್ಲೋರಿಡಾ ವಿಶ್ವವಿದ್ಯಾಲಯ ಮತ್ತು ಸ್ವೀಟ್‍ವಾಟರ್ ನಗರವನ್ನ ಸಂಪರ್ಕಿಸುತ್ತದೆ. ಸೇತುವೆಯನ್ನ ಮಾರ್ಚ್ 10ರಂದು ಲೋಕಾರ್ಪಣೆ ಮಾಡಲಾಗಿತ್ತು. ವಾಹನ ದಟ್ಟಣೆ ಇರುವ ರಸ್ತೆಯನ್ನ ದಾಟಲು ಜನರಿಗೆ ಅನುಕೂಲವಾಗಲು ಈ ಸೇತುವೆಯನ್ನ ನಿರ್ಮಿಸಲಾಗಿತ್ತು.
Advertisement
Advertisement
ಸುಮಾರು 14.2 ಮಿಲಿಯನ್ ಡಾಲರ್ (ಅಂದಾಜು 92 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸೇತುವೆ, ಚಂಡಮಾರುತಗಳನ್ನ ಸಹಿಸಬಲ್ಲ ಮತ್ತು 100 ವರ್ಷಗಳ ಕಾಲ ಬಾಳಿಕೆ ಬರುವ ಹಾಗೆ ನಿರ್ಮಿಸಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿತ್ತು.
Advertisement
ವಿಪರ್ಯಾಸವೆಂದರೆ ಸೇತುವೆ ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ಕುಸಿದು ಬಿದ್ದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ರಾಷ್ಟ್ರೀಯ ಸಾರಿಗೆ ಮತ್ತು ಸುರಕ್ಷತಾ ಮಂಡಳಿಯ ತಂಡವು ಸೇತುವೆ ಕುಸಿದ ಕಾರಣದ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಘಟನೆಯ ಸಂಕ್ಷಿಪ್ತ ವಿವರವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ಗವರ್ನರ್ ಸ್ಕಾಟ್, ಸೆನೆಟರ್ ಮಾರ್ಕೊ ರುಬಿಯೊರೊಂದಿಗೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
https://www.instagram.com/p/BgWnBIrFepW/?utm_source=ig_embed
https://www.instagram.com/p/BgWp1fCBPqG/?utm_source=ig_embed