ಬೊಲಿವಿಯಾ: ಎರಡು ಬಸ್‌ಗಳ (Bus) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 37 ಜನರು ಸಾವನ್ನಪ್ಪಿದ್ದು, 39 ಮಂದಿ ಗಂಭೀರ ಗಾಯಗೊಂಡ ಘಟನೆ ಅಮೆರಿಕದ (America) ಬೊಲಿವಿಯಾದಲ್ಲಿ (Bolivia) ನಡೆದಿದೆ.
ಶನಿವಾರ ಬೆಳಗ್ಗೆ 7 ಗಂಟೆಗೆ ಉಯುನಿ ಮತ್ತು ಕೊಲ್ಚಾನಿ ನಗರಗಳ ನಡುವಿನ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಉಯುನಿ ಪಟ್ಟಣದ ನಾಲ್ಕು ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಟೋಸಿಯ ಇಲಾಖಾ ಪೊಲೀಸ್ ಕಮಾಂಡ್‌ನ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಹಿಮಕುಸಿತ – ಮೃತರ ಸಂಖ್ಯೆ 5ಕ್ಕೆ ಏರಿಕೆ; ರಕ್ಷಣಾ ಕಾರ್ಯಕ್ಕೆ ರೆಕೊ ರಾಡಾರ್‌ಗಳು, ಡ್ರೋನ್ ಬಳಕೆ
- Advertisement
ಮೃತಪಟ್ಟವರನ್ನು ಮತ್ತು ಗಾಯಗೊಂಡವರನ್ನು ಗುರುತಿಸುವ ಕೆಲಸವನ್ನು ಪೊಲೀಸ್ ಸಿಬ್ಬಂದಿ ಮಾಡುತ್ತಿದ್ದಾರೆ. ಒಂದು ಬಸ್ಸು ಲ್ಯಾಟಿನ್ ಅಮೆರಿಕದ ಪ್ರಮುಖ ಕಾರ್ನೀವಲ್ ಆಚರಣೆಗಳಲ್ಲಿ ಒಂದಾದ ಒರುರೊಗೆ ಹೋಗುತ್ತಿದ್ದ ಸಂದರ್ಭ ಇನ್ನೊಂದು ಬಸ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಮೊದಲ ಬಾರಿಗೆ ಆಪಲ್ ಉತ್ಪನ್ನ ತಯಾರಿಸಲು ಚೀನಾ, ವಿಯೆಟ್ನಾಂಗೆ ಎಲೆಕ್ಟ್ರಾನಿಕ್ ಭಾಗಗಳು ರಫ್ತು!
- Advertisement