InternationalLatestMain Post

ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ – ದುಷ್ಕರ್ಮಿ ಗುಂಡಿಗೆ ಮೂವರು ಬಲಿ

ವಾಷಿಂಗ್ಟನ್: ಅಮೇರಿಕಾದ ಉತ್ತರ ಮೇರಿಲ್ಯಾಂಡ್‍ನ ಕಾರ್ಖಾನೆಯೊಂದರಲ್ಲಿ ಬಂದೂಕುಧಾರಿಯೋರ್ವ ಗುಂಡಿನ ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೈನಿಕರೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾಗ ಬಂದೂಕುಧಾರಿಯನ್ನು ತಕ್ಷಣಕ್ಕೆ ಗುರುತಿಸಲಾಗಲಿಲ್ಲ. ಆದರೆ ನಂತರ ಗುಂಡೇಟಿನಿಂದ ಗಾಯಗೊಂಡ ದುಷ್ಕರ್ಮಿ ಹಾಗೂ ಸೈನಿಕರೊಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವಾಷಿಂಗ್ಟನ್ ಕೌಂಟಿ ಶೆರಿಫ್ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಕೈ ಶಾಸಕರನ್ನು ಸೆಳೆಯದಂತೆ ಇಂಟರ್‌ನೆಟ್ ಸೇವೆಯನ್ನೇ ಸ್ಥಗಿತಗೊಳಿಸಿದ ರಾಜಸ್ಥಾನ

ಈ ಘಟನೆಯ ಹಿಂದಿನ ಕಾರಣವೇನು ಎಂಬುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಯಾವುದೇ ಬೆದರಿಕೆಗಳನ್ನು ಕೂಡ ಹಾಕಲಾಗಿರಲಿಲ್ಲ. ಸದ್ಯ ದಾಳಿ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಜೊತೆಗೆ ಬಂದೂಕುಧಾರಿ ಸೈನಿಕರೊಬ್ಬರ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಿದ್ದಾರೆ.

crime

ಈ ಕಾರ್ಖಾನೆಯು ಸುಮಾರು 100ಕ್ಕೂ ಹೆಚ್ಚು ದೇಶಗಳಿಗೆ ಕಾಂಕ್ರೀಟ್ ಉತ್ಪಾದನಾ ಸಾಧನಗಳನ್ನು ಪೂರೈಸುತ್ತದೆ. ಸದ್ಯ ಘಟನೆ ವೇಳೆ ಎಷ್ಟು ಮಂದಿ ಉದ್ಯೋಗಿಗಳಿದ್ದರು ಎಂಬ ಮಾಹಿತಿಯನ್ನು ಕಲೆಹಾಕುತ್ತಿದ್ದು, ಇದೀಗ ಈ ಸಂಬಂಧ ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಗೋಲ್ಡೀ ಬ್ರಾರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ – ಸಿಧು ಹತ್ಯೆ ಕೇಸ್‌ನಲ್ಲಿ ಅಲ್ಲ

Leave a Reply

Your email address will not be published.

Back to top button