ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಬಲೂಚಿಸ್ತಾನ್ (Balochistan) ಪ್ರಾಂತ್ಯದಲ್ಲಿ ಬಸ್ ಕಮರಿಗೆ ಉರುಳಿದ್ದು, ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಕನಿಷ್ಠ 28 ಮಂದಿ ಮೃತಪಟ್ಟಿದ್ದಾರೆ.
ಬಸ್ ಟರ್ಬತ್‌ನಿಂದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾಕ್ಕೆ ಹೋಗುತ್ತಿತ್ತು. ಹೀಗೆ ಕ್ವೆಟ್ಟಾದಿಂದ ಸುಮಾರು 700 ಕಿಮೀ ದೂರದಲ್ಲಿರುವ ವಾಶುಕ್ ಪಟ್ಟಣದ ಬಳಿ ಕಮರಿಗೆ ಉರುಳಿದೆ. ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
Advertisement
Advertisement
6 ಮಂದಿ ಸ್ಥಳದಲ್ಲೇ ಮೃತಪಟ್ಟರೆ, 22 ಮಂದಿ ಬಾಸಿಮಾದ ಸಿವಿಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹಾಗೂ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ ಎಂದು ಸಹಾಯಕ ಆಯುಕ್ತ (ಎಸಿ) ಇಸ್ಮಾಯಿಲ್ ಮೆಂಗಲ್ ದೃಢಪಡಿಸಿದ್ದಾರೆ. ತಿರುವಿನಲ್ಲಿ ಬಸ್‌ನ ಟೈಯರ್ ಒಡೆದು ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಮರಿಗೆ ಬಿದ್ದಿದೆ ಎಂದು ಮೆಂಗಲ್ ಹೇಳಿದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಿ: ಮುಕ್ಕೊಂಬು ಅಣೆಕಟ್ಟೆಯಲ್ಲಿ ರೈತರ ಪ್ರತಿಭಟನೆ
Advertisement
ಅತಿವೇಗದ ಚಾಲನೆಯಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಸಂಚಾರ ನಿಯಮಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸದ ಪಾಕಿಸ್ತಾನದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ.