ಮೊಗಡಿಶು: ಜಗತ್ತಿನ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾದ ಸೊಮಾಲಿಯಾದಲ್ಲಿ (Somalia) ಸ್ಫೋಟ ಸಂಭವಿಸಿದ್ದು, 25 ಮಕ್ಕಳು ಸೇರಿದಂತೆ 27 ಮಂದಿ ಸಾವಿಗೀಡಾಗಿದ್ದಾರೆ.
ಪೂರ್ವ ಲೋವರ್ ಶಾಬೆಲ್ಲೆಯ ಜನಾಲೆ ಪ್ರದೇಶದ ಮುರಾಲೆ ಗ್ರಾಮದ ಫುಟ್ಬಾಲ್ ಮೈದಾನದಲ್ಲಿ ಸ್ಫೋಟ ಸಂಭವಿಸಿದೆ. ಹಳೆಯ ಬಾಂಬ್‌ನ ಅವಶೇಷಗಳು ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆ. ಸ್ಫೋಟದಲ್ಲಿ 53 ಮಕ್ಕಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಟ್ರಂಪ್ ಮನೆಯ ಬೆಡ್‌ರೂಮ್, ಬಾತ್‌ರೂಮ್‌ನಲ್ಲಿ ರಹಸ್ಯ ದಾಖಲೆಗಳು
Advertisement
Advertisement
ಕ್ರೊಯೊಲಿ ಪಟ್ಟಣದ ಉಪ ಜಿಲ್ಲಾಧಿಕಾರಿ ಅಬ್ದಿ ಅಹ್ಮದ್ ಅಲಿ, “ಹಳ್ಳಿಯ ತೆರೆದ ಮೈದಾನದಲ್ಲಿ ಮಕ್ಕಳು ಆಡುತ್ತಿದ್ದಾಗ ಬಾಂಬ್‌ಗಳು ಮತ್ತು ನೆಲಬಾಂಬ್‌ಗಳಂತಹ ಯುದ್ಧದ ಸ್ಫೋಟಕ ಅವಶೇಷಗಳು ಸ್ಫೋಟಿಸಿವೆ” ಎಂದು ತಿಳಿಸಿದ್ದಾರೆ.
Advertisement
Advertisement
ಮೃತರ ಪೈಕಿ 22 ಮಕ್ಕಳ ಶವಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇನ್ನಿಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಾಗಲೇ ಅವರೂ ಕೊನೆಯುಸಿರೆಳೆದಿದ್ದರು. ಮೊಗಾದಿಶುಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಮತ್ತೊಂದು ಮಗು ಸಾವಿಗೀಡಾಗಿದೆ. ಇದನ್ನೂ ಓದಿ: ಕೊರೊನಾ ವೇಳೆ ಪಾರ್ಟಿ ಮಾಡಿ ಪಿಎಂ ಸ್ಥಾನ ಕಳೆದುಕೊಂಡಿದ್ದ ಬೋರಿಸ್ ಜಾನ್ಸನ್ ಬ್ರಿಟನ್ ಸಂಸತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ