ಗಾಜಾ: ಆಹಾರದ ನೆರವಿಗಾಗಿ ಕಾಯುತ್ತಿದ್ದ ಸಂತ್ರಸ್ತರಿದ್ದ ಶೆಲ್ ಮೇಲೆ ದಾಳಿ ನಡೆದಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. 155 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಲ್ ಶಿಫಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ವೈದ್ಯ ಮೊಹಮ್ಮದ್ ಘ್ರಾಬ್ ತಿಳಿಸಿದ್ದಾರೆ. ಇದನ್ನೂ ಓದಿ: ಜಪಾನ್ ಖಾಸಗಿ ಉಪಗ್ರಹ ಉಡಾವಣೆಯಾದ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟ
Advertisement
Advertisement
ಗಾಜಾದಲ್ಲಿನ ಕುವೈತ್ ವೃತ್ತದಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ಸಂತ್ರಸ್ತರ ಮೇಲೆ ಇಸ್ರೇಲಿ ಆಕ್ರಮಣ ಪಡೆಗಳು ದಾಳಿ ನಡೆಸಿವೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯವು ಗಂಭೀರ ಆರೋಪ ಮಾಡಿದೆ. ದಾಳಿಗೆ ಇಸ್ರೇಲ್ ಹೊಣೆ ಎಂದು ಗಾಜಾ ಸಿವಿಲ್ ಡಿಫೆನ್ಸ್ ವಕ್ತಾರ ಮಹಮೂದ್ ಬಸಲ್ ಆರೋಪಿಸಿದ್ದಾರೆ.
Advertisement
ಉತ್ತರ ಗಾಜಾ ಪಟ್ಟಿಯಲ್ಲಿ ಸಂಭವಿಸುವ ಕ್ಷಾಮದ ಪರಿಣಾಮವಾಗಿ ಪರಿಹಾರದ ನೆರವಿಗಾಗಿ ಕಾಯುತ್ತಿರುವ ಮುಗ್ಧ ನಾಗರಿಕರನ್ನು ಕೊಲ್ಲುವ ನೀತಿಯನ್ನು ಇಸ್ರೇಲಿ ಆಕ್ರಮಣ ಪಡೆಗಳು ಇನ್ನೂ ಅಭ್ಯಾಸ ಮಾಡುತ್ತಿವೆ ಎಂದು ಮಹಮೂದ್ ಬಸಲ್ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಹೈದರಾಬಾದ್ ಮಹಿಳೆಯ ಶವ ಪತ್ತೆ – ಪತಿಯಿಂದಲೇ ಕೊಲೆ ಶಂಕೆ
Advertisement
ಏತನ್ಮಧ್ಯೆ, ಮಾನವೀಯ ನೆರವು ಮೊದಲ ಬಾರಿಗೆ ಸಮುದ್ರದ ಮೂಲಕ ಗಾಜಾ ಪ್ರವೇಶಿಸಲಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ. UAE ಯಿಂದ ನೆರವಿನ ಹಡಗು ಹಡಗು ಮಂಗಳವಾರ ಸೈಪ್ರಸ್‌ನ ಲಾರ್ನಾಕಾ ಬಂದರಿನಿಂದ ಪ್ರಯಾಣಿಸಿದೆ ಎಂದು ಹೇಳಿದೆ.