ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ – 15 ಡೇರೆಗಳು ಭಸ್ಮ

Public TV
1 Min Read
At Least 15 Tents Burnt In Fire At Maha Kumbh None Hurt

ಪ್ರಯಾಗ್‌ರಾಜ್‌: ಮಹಾ ಕುಂಭಮೇಳದಲ್ಲಿ (Maha Kumbhmela) ಅಗ್ನಿ ಅವಘಡ (Fire Accident) ಸಂಭವಿಸಿದ್ದು, ಕನಿಷ್ಠ 15 ಡೇರೆಗಳು ಸುಟ್ಟುಹೋಗಿವೆ.

ಇಂದು (ಗುರುವಾರ) ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ. ಮಹಾ ಕುಂಭಮೇಳ ಪ್ರದೇಶದ ಸೆಕ್ಟರ್ 22ರ ಹೊರ ವಲಯದ ಚಾಮನ್‌ಗಂಜ್ ಚೌಕಿ ಬಳಿಯ ಡೇರೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿಯನ್ನು ನಂದಿಸಲಾಗಿದೆ ಎಂದು ಕುಂಭಮೇಳಕ್ಕೆ ನಿಯೋಜಿಸಲಾದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಮೋದ್ ಶರ್ಮಾ ತಿಳಿಸಿದ್ದಾರೆ.

ರಸ್ತೆ ಇಲ್ಲದ ಕಾರಣ, ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಲು ತೊಂದರೆಯಾಯಿತು. ಆದರೆ, ಬೆಂಕಿ ಸಂಪೂರ್ಣವಾಗಿ ನಂದಿಸಲಾಯಿತು. ಈ ಟೆಂಟ್‌ಗಳು ಅನಧಿಕೃತವಾಗಿದ್ದವು ಎಂದು ಅವರು ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಹಾಗೂ ಯಾರಿಗೂ ಗಾಯಗಳಾಗಿಲ್ಲ. ಅವಘಡಕ್ಕೆ ಕಾರಣ ಏನು ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Share This Article