ಹನೋಯಿ (ವಿಯೆಟ್ನಾಂ): ಮಧ್ಯ ಹನೋಯಿಯಲ್ಲಿ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ (Vietnam Apartment Fire) ಬೆಂಕಿ ಅವಘಡದಿಂದಾಗಿ 14 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವಾರು ವಿಶ್ವವಿದ್ಯಾನಿಲಯಗಳಿಗೆ ನೆಲೆಯಾಗಿರುವ ವಿಯೆಟ್ನಾಂನ ರಾಜಧಾನಿಯ ಜನನಿಬಿಡ ಕೌ ಗಿಯಾಯ್ ಜಿಲ್ಲೆಯ ಕಟ್ಟಡದಿಂದ ಹೊಗೆ ಮತ್ತು ವಿಷಕಾರಿ ಅನಿಲಗಳು ಮಧ್ಯಾಹ್ನ 12:30 ಗಂಟೆ ಹೊತ್ತಿಗೆ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ತೀವ್ರ ಪ್ರಕ್ಷುಬ್ಧತೆಯಿಂದ ಕುಸಿದ ಸಿಂಗಾಪುರ್ ಏರ್‌ಲೈನ್ಸ್‌ನಲ್ಲಿದ್ದ 22 ಮಂದಿಯ ಬೆನ್ನುಮೂಳೆಗೆ ಗಾಯ!
Advertisement
Advertisement
ರಕ್ಷಣಾ ಸಿಬ್ಬಂದಿ ಕಾಂಪ್ಲೆಕ್ಸ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸಮುಚ್ಚಯದ ಹೊರಗಡೆ ಗೇಟ್ ಬೀಗ ಮುರಿದು, ಕಿಟಕಿ ಒಡೆದು ಒಳಗೆ ಸಿಲುಕಿದ್ದ 7 ಮಂದಿಯನ್ನು ರಕ್ಷಿಸಿದ್ದಾರೆ. ಕಾಂಪ್ಲೆಕ್ಸ್ ಒಳಗೆ ಬೆಂಕಿ ಕಾಣಿಸಿಕೊಂಡಾಗ, ಪಟಾಕಿ ಸ್ಫೋಟದಂತೆ ಶಬ್ದ ಕೇಳಿಬಂತು. ಒಳಗಿದ್ದ ಜನರು ಕಿರುಚಾಡಿದ್ದನ್ನು ಕೇಳಿ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
Advertisement
ಬೆಂಕಿ ತೀವ್ರತೆ ಹೆಚ್ಚಾದ ಪರಿಣಾಮ ಪಾರ್ಕಿಂಗ್ ಮಾಡಿದ್ದ ಮೋಟರ್‌ಬೈಕ್‌ಗಳು, ಎಲೆಕ್ಟ್ರಿಕ್ ಬೈಸಿಕಲ್‌ಗಳು ಸುಟ್ಟು ಕರಕಲಾಗಿವೆ. ಬೆಂಕಿಯನ್ನು ಸಂಪೂರ್ಣ ನಂದಿಸಿದಾಗ 14 ಮಂದಿ ಮೃತಪಟ್ಟಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಉಕ್ರೇನ್‌ಗೆ ಮಿಲಿಟರಿ ನೆರವು ನೀಡಲು ಮುಂದಾದ ಅಮೆರಿಕ
Advertisement
ಅವಘಡದಿಂದ ಬದುಕುಳಿದ ಮೂವರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಒಳಗೆ ಎಷ್ಟು ಮಂದಿ ಇದ್ದರು ಎಂಬುದು ಸ್ಪಷ್ಟವಾಗಿಲ್ಲ.