ವಾಷಿಂಗ್ಟನ್: ಭಾರೀ ಹವಾಮಾನ ವೈಪರಿತ್ಯದಿಂದ ಅಮೆರಿಕ ತತ್ತರಿಸಿದೆ. ಅಮೆರಿಕ ಆಗ್ನೇಯ ಭಾಗದ ಕೆಂಟಕಿಯಲ್ಲಿ ಕುಂಭದ್ರೋಣ ಮಳೆಯಿಂದ ಹಠಾತ್ ಪ್ರವಾಹ ಉಂಟಾಗಿದೆ.
15 ಸೆಂಟಿ ಮೀಟರ್ ಮಳೆಯಿಂದ ರಸ್ತೆಗಳೆಲ್ಲಾ ಜಲಮಯವಾಗಿವೆ. ಪ್ರವಾಹದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ. 1 ಸಾವಿರ ಮಂದಿಯನ್ನು ರಕ್ಷಿಸಲಾಗಿದೆ. ಬಲವಾದ ಗಾಳಿ ಬೀಸ್ತಿರುವ ಕಾರಣ 40 ಸಾವಿರ ಮನೆಗಳು ಕತ್ತಲಲ್ಲಿ ಮುಳುಗಿವೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಬಟ್ಟೆ ತೊಳೆಯುತ್ತಾರಾ? – ಬಟ್ಟೆ ಕೊಳೆಯಾದ್ರೆ ಏನ್ ಮಾಡ್ತಾರೆ?
Advertisement
Advertisement
ಅತ್ತ, ಅಮೆರಿಕದ ಉತ್ತರ ಪ್ರಾಂತ್ಯದ ಕೊರೆವ ಚಳಿಗೆ ತತ್ತರಿಸಿದೆ. ನಾರ್ತ್ ಡಕೋಟಾ, ಸೌತ್ ಡಕೋಟಾದ ಕೆಲವೆಡೆ ಉಷ್ಣಾಂಶ -45 ಡಿಗ್ರಿಗೆ ಕುಸಿದಿದೆ. ಜಾರ್ಜಿಯಾ, ಫ್ಲೋರಿಡಾದಲ್ಲಿ ಟೋರ್ನಡೋ ಎಚ್ಚರಿಕೆ ನೀಡಲಾಗಿದೆ.ಇಂಡಿಯಾನಾ ಪ್ರದೇಶದಲ್ಲಿ ಭಾರಿ ಹಿಮಪಾತವಾಗಿದೆ. ಇದನ್ನೂ ಓದಿ: ಅಮೆರಿಕದಿಂದ 2ನೇ ಹಂತದ ಗಡಿಪಾರು – ಇಂದು 119 ಮಂದಿ ಅಕ್ರಮ ವಲಸಿಗರು ಭಾರತಕ್ಕೆ