ಬೆಂಗಳೂರು: ಸಿಎಂ ಆದ ಬಳಿಕ ಗಡ್ಡಕ್ಕೆ (Beard) ಮುಕ್ತಿ ಕೊಡುತ್ತೇನೆ ಎಂದಿದ್ದ ಡಿಕೆ ಶಿವಕುಮಾರ್ (D.K.Shivakumar) ಕೊನೆಗೂ ನೆರವೇರಿಲ್ಲ.
ಶನಿವಾರ ಮಧ್ಯಾಹ್ನ 12:30ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿ ಜಾರಿ ನಿರ್ದೇಶನಾಲಯ ಡಿಕೆಯನ್ನು ಬಂಧಿಸಿ ತಿಹಾರ್ (Tihar) ಜೈಲಿನಲ್ಲಿಟ್ಟಿತ್ತು. ಇದನ್ನೂ ಓದಿ: ಎರಡು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಮಾಡುತ್ತೇವೆ: ರಾಮಲಿಂಗರೆಡ್ಡಿ
Advertisement
Advertisement
ಡಿಕೆಶಿ ಅವರು ತಿಹಾರ್ ಜೈಲಿನಲ್ಲಿದ್ದಾಗ ಸಿಎಂ ಆದ ಬಳಿಕ ಗಡ್ಡ ತೆಗೆಯುವ ಶಪಥ ಮಾಡಿದ್ದರು. ಆದರೆ ಇಲ್ಲಿಯವರೆಗೂ ಗಡ್ಡವನ್ನು ತೆಗೆಯಲೇ ಇಲ್ಲ. ಅದರ ಬದಲಿಗೆ ಸ್ವಲ್ಪ ಟ್ರಿಮ್ ಮಾಡಿಸಿ ಚಿಕ್ಕದಾಗಿಸಿದ್ದಾರೆ. ಇದನ್ನೂ ಓದಿ: ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಮಾನಿಗಳಿಂದ ನೂಕುನುಗ್ಗಲು- ಇಬ್ಬರಿಗೆ ಗಾಯ
Advertisement
Advertisement
ಡಿಸಿಎಂ ಸ್ಥಾನ ಸಿಕ್ಕಿರುವುದಕ್ಕೆ ಗಡ್ಡಕ್ಕೆ ಟ್ರಿಮ್ ಮಾಡಿಸಿರುವ ಡಿಕೆಶಿ ಸಿಎಂ ಪಟ್ಟಕ್ಕೇರಿದ ಮೇಲೆ ತಮ್ಮ ಗಡ್ಡಕ್ಕೆ ಮುಕ್ತಿಯನ್ನು ನೀಡುತ್ತಾರ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಜೋಡೆತ್ತು ಸರ್ಕಾರಕ್ಕೆ ಕ್ಷಣಗಣನೆ – ಇಂದು 8 ಮಂದಿ ಶಾಸಕರು ಪ್ರಮಾಣವಚನ ಸ್ವೀಕಾರ