ನವದೆಹಲಿ: ಸೋಮವಾರ ದೆಹಲಿಯಲ್ಲಿ (NewDelhi) 40.1 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದ್ದು, ಕಳೆದ 85 ವರ್ಷಗಳಲ್ಲಿ ಸೆಪ್ಟೆಂಬರ್‍ನಲ್ಲಿ ವರದಿಯಾದ ಅತಿಹೆಚ್ಚಿನ ತಾಪಮಾನ ಎಂದು ಹವಮಾನ ಇಲಾಖೆ ಹೇಳಿದೆ.
Advertisement
1938ರ ಸೆಪ್ಟೆಂಬರ್ 16 ರಂದು ದಾಖಲಾದ 40.6 ಡಿಗ್ರಿ ಸೆಲ್ಸಿಯಸ್ ಸೆಪ್ಟೆಂಬರ್ ನಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ ದಾಖಲಾಗಿತ್ತು. ಹೆಚ್ಚಿನ ತಾಪಮಾನಕ್ಕೆ ಮಳೆ (Rain) ಕೊರತೆ ಮತ್ತು ದುರ್ಬಲ ಮಾನ್ಸೂನ್ ಪರಿಸ್ಥಿತಿಗಳು ಕಾರಣವೆಂದು ಹವಾಮಾನ ಇಲಾಖೆ (Weather Department) ಹೇಳಿದೆ. ದೆಹಲಿಯಲ್ಲಿ ಆಗಸ್ಟ್‍ನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿತ್ತು. ಆದರೆ ಈ ಬಾರಿ ಶೇ.61 ರಷ್ಟು ಮಳೆಯ ಕೊರತೆ ಕಂಡುಬಂದಿದ್ದು, ಸೆಪ್ಟೆಂಬರ್ 4 ರವರೆಗಿನ ತಿಂಗಳ ಸಾಮಾನ್ಯ ಮಳೆ 32.4 ಮಿ.ಮೀ ಆಗಿದ್ದರೆ ಸೆಪ್ಟೆಂಬರ್‍ನಲ್ಲಿ ಇಲ್ಲಿಯವರೆಗೆ ಮಳೆಯಿಲ್ಲ. ಇದನ್ನೂ ಓದಿ: ದೇಶದಲ್ಲೇ ಪ್ರಥಮ 500 ಕೆವಿಎ ಭೂಗತ ಪರಿವರ್ತಕ ಕೇಂದ್ರದ ಲೋಕಾರ್ಪಣೆ
Advertisement
Advertisement
ಪ್ರಾದೇಶಿಕ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, 7 ದಿನಗಳಲ್ಲಿ ನಗರದಲ್ಲಿ ಸ್ವಲ್ಪಮಟ್ಟಿಗೆ ಮೋಡ ಕವಿದ ವಾತಾವರಣ ಕಂಡುಬರಲಿದೆ. ಈ ವಾರ ಗರಿಷ್ಠ ಮತ್ತು ಕನಿಷ್ಠ ತಾಪಮಾನ 37 ಮತ್ತು 27 ಡಿಗ್ರಿ ಸೆಲ್ಸಿಯಸ್‍ನಲ್ಲಿ ನೆಲೆಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂತೆಯೇ ಈ ವರ್ಷ ದೇಶವು ಮಳೆಯ ಭೀಕರ ಕೊರತೆಯ ನಡುವೆ ಶತಮಾನದಲ್ಲಿ ಆಗಸ್ಟ್‍ನಲ್ಲಿ ತನ್ನ ಗರಿಷ್ಠ ಸರಾಸರಿ ತಾಪಮಾನವನ್ನು ದಾಖಲಿಸಿದೆ.
Advertisement
Web Stories