ನವದೆಹಲಿ: ಏಸಸ್ ಕಂಪೆನಿಯು ಬಜೆಟ್ ಗಾತ್ರದ ನೂತನ ಫೀಚರ್ ಗಳನ್ನೊಳಗೊಂಡ ಏಸಸ್ ಝೆನ್‍ಫೋನ್ ಮ್ಯಾಕ್ಸ್ ಎಂ1 ಹಾಗೂ ಝೆನ್‍ಫೋನ್ ಲೈಟ್ ಎಲ್ 1 ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಏಸಸ್ ಝೆನ್‍ಫೋನ್ ಸಂಸ್ಥೆಯು ಭಾರತದಲ್ಲಿ ಬಜೆಟ್ ಗಾತ್ರದ ಝೆನ್‍ಫೋನ್ ಮ್ಯಾಕ್ಸ್ ಎಂ1 ಹಾಗೂ ಝೆನ್‍ಫೋನ್ ಲೈಟ್ ಎಲ್ 1 ಸ್ಮಾರ್ಟ್ ಫೋನ್‍ಗಳನ್ನು ಬಿಡುಗಡೆ ಮಾಡಿದ್ದು, ಈ ಫೋನ್‍ಗಳು ರೆಡ್‍ಮೀ ಹಾಗೂ ರಿಯಲ್ ಮೀ ಒನ್ ಸ್ಮಾರ್ಟ್ ಫೋನ್‍ಗಳಿಗೆ ಪೈಪೋಟಿ ನೀಡಲಿವೆ.
Advertisement
Get a massive 4000mAh battery and a lot more with the Zenfone Max at a special festive offer of just ₹7499. Avail No Cost EMI starting ₹1250/month among other bank offers. Shop during @Flipkart’s Festive Dhamaka Days. #WhattePowerhouse indeed! https://t.co/N4POW0sfQj (1/2) pic.twitter.com/bM5eZCPWYA
— ASUS India (@ASUSIndia) October 18, 2018
Advertisement
ತನ್ನ ಎರಡೂ ಸ್ಮಾರ್ಟ್ ಫೋನ್‍ಗಳಲ್ಲಿ ಸ್ನಾಪ್ ಡ್ರಾಗನ್ ಪ್ರೊಸೆಸರ್ ಬಳಸಿದ್ದು, ಸುದೀರ್ಘ ಬ್ಯಾಟರಿಯನ್ನು ಸಹ ನೀಡಿದೆ. ಈ ನೂತನ ಫೋನ್‍ಗಳು ಇದೇ ಅಕ್ಟೋಬರ್ 30 ರಿಂದ ಆನ್‍ಲೈನ್ ಜಾಲತಾಣ ಫ್ಲಿಪ್‍ಕಾರ್ಟ್‍ಗಳಲ್ಲಿ ಗ್ರಾಹಕರಿಗೆ ಸಿಗಲಿವೆ.
Advertisement
ಏಸಸ್ ಝೆನ್‍ಫೋನ್ ಮ್ಯಾಕ್ಸ್ ಎಂ1 ಗುಣ ವೈಶಿಷ್ಟ್ಯಗಳು:
ಬೆಲೆ ಎಷ್ಟು?
3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಗೆ 7,499 ರೂಪಾಯಿ ಬೆಲೆ ನಿಗದಿಪಡಿಸಿದ್ದು, ಕೇವಲ ಒಂದೇ ಒಂದು ಆವೃತ್ತಿಯಲ್ಲಿ ಮ್ಯಾಕ್ಸ್ ಎಂ1 ಲಭ್ಯವಿರಲಿದೆ. ಸ್ಮಾರ್ಟ್ ಫೋನ್ ಡೀಪ್ ಸೀ ಬ್ಲಾಕ್ ಹಾಗೂ ಸನ್‍ಲೈಟ್ ಗೋಲ್ಡ್ ಬಣ್ಣಗಳಲ್ಲಿ ಸಿಗುತ್ತದೆ.
Advertisement
ಬಾಡಿ ಮತ್ತು ಡಿಸ್ಪ್ಲೇ:
147.3 X 70.9 X 8.7 ಮಿ.ಮೀ. ಗಾತ್ರ, 150 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.45 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (720X1440 ಪಿಕ್ಸೆಲ್, 16:10 ಅನುಪಾತ 247 ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.0 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 430, ಅಕ್ಟಾ ಕೋರ್ ಪ್ರೊಸೆಸರ್, 1.4 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 505 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಹೊಂದಿದೆ.
ಕ್ಯಾಮೆರಾ ಹಾಗೂ ಇತರೇ ಫೀಚರ್ ಗಳು:
ಮುಂಭಾಗ 8 ಎಂಪಿ ಕ್ಯಾಮೆರಾ, ಹಿಂಭಾಗ 13 ಎಂಪಿ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಇದರೊಂದಿಗೆ ಫಿಂಗರ್ ಪ್ರಿಂಟ್ ಸೆನ್ಸರ್, 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.
ಝೆನ್‍ಫೋನ್ ಲೈಟ್ ಎಲ್1 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
ಬೆಲೆ ಎಷ್ಟು?
2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿಗೆ 5,999 ರೂಪಾಯಿ ಬೆಲೆ ನಿಗದಿಪಡಿಸಿದ್ದು, ಕೇವಲ ಒಂದೇ ಒಂದು ಆವೃತ್ತಿಯಲ್ಲಿ ಲೈಟ್ ಎಲ್1 ಸ್ಮಾರ್ಟ್ ಫೋನ್ ಸಿಗುತ್ತದೆ. ಬ್ಲಾಕ್ ಹಾಗೂ ಗೋಲ್ಡ್ ಬಣ್ಣಗಳಲ್ಲಿ ಫೋನ್ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೇ:
147.3 X 71.8 X 8.7 ಮಿ.ಮೀ., 140 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.45 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (720X1440 ಪಿಕ್ಸೆಲ್, 18:9 ಅನುಪಾತ 295 ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.0 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 430, ಅಕ್ಟಾ ಕೋರ್ ಪ್ರೊಸೆಸರ್, 1.4 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 505 ಗ್ರಾಫಿಕ್ ಪ್ರೊಸೆಸರ್, 512 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿ ನೀಡಲಾಗಿದೆ.
ಕ್ಯಾಮೆರಾ ಹಾಗೂ ಇತರೇ ಫೀಚರ್ ಗಳು:
ಮುಂಭಾಗ 5 ಎಂಪಿ ಕ್ಯಾಮೆರಾ, ಹಿಂಭಾಗ 13 ಎಂಪಿ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಇದರೊಂದಿಗೆ 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.
Switch to the fast lane with Snapdragon™ Octa-Core processor in the Zenfone Lite at a special festive price of just ₹5999. Shop for it with CMP at ₹99, ₹2200 cashback for Jio users and more at @Flipkart Festive Dhamaka Days. #WhattePerformance https://t.co/T1Rsg0DWQ2 (2/2) pic.twitter.com/IkHbprll24
— ASUS India (@ASUSIndia) October 18, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv