ವಾಷಿಂಗ್ಟನ್: ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ ಎಂದು ಭಾರತೀಯ ಮೂಲದ ನಾಸಾ ಗಗನಯಾತ್ರಿ ಡಾ.ಅನಿಲ್ ಮೆನನ್ ಸಂದರ್ಶನ ಹೇಳಿದ್ದಾರೆ.
Advertisement
ಶೀಘ್ರದಲ್ಲೇ ಚಂದ್ರನತ್ತ ಹಾರುವ ಹತ್ತು ಗಗನಯಾತ್ರಿಗಳಲ್ಲಿ ಭಾರತೀಯ ಮೂಲದ ಡಾ.ಅನಿಲ್ ಮೆನನ್ ಸಹ ಒಬ್ಬರು. ಈ ವೇಳೆ ಮೆನನ್ ಅವರು ವಿಶೇಷ ಸಂದರ್ಶನ ಒಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿದ್ದಾಗ, ಆಹಾರವು ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಅಲ್ಲಿ ದ್ರವ ರೂಪದ ಎಲ್ಲ ವಸ್ತುಗಳು ತೇಲುತ್ತಿರುತ್ತೆ. ಮೂಗು ಉಸಿರುಕಟ್ಟಿಕೊಂಡಿರುತ್ತೆ. ಅದಕ್ಕೆ ಗಗನಯಾತ್ರಿಗಳಿಗೆ ಭಾರತೀಯ ಆಹಾರ ಎಂದರೆ ಇಷ್ಟ. ಏಕೆಂದರೆ ಭಾರತೀಯ ಆಹಾರಗಳು ಮಸಾಲೆಯುಕ್ತವಾಗಿರುತ್ತೆ. ಅದನ್ನು ತಿನ್ನಲು ಎಲ್ಲ ಗಗನಯಾತ್ರಿಗಳು ಇಷ್ಟ ಪಡುತ್ತಾರೆ. ಈ ಕುರಿತು ಸ್ವತಃ ಗಗನಯಾತ್ರಿಗಳೇ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್ ಖಾತೆ ಹ್ಯಾಕ್
Advertisement
Advertisement
ನಾನು ನನ್ನ ಹೃದಯದಲ್ಲಿ ಕೇರಳಗೆ ವಿಶೇಷ ಸ್ಥಾನವನ್ನು ಕೊಟ್ಟಿದ್ದೇನೆ. ಅಲ್ಲಿಗೆ ಹೋದರೆ ನನಗೆ ನೆಮ್ಮದಿ ಇರುತ್ತೆ. ಒಂದು ರೀತಿಯ ಸುರಕ್ಷತೆಯ ಭಾವ ಇರುತ್ತೆ. ಅಲ್ಲಿನ ಜನರು ನನ್ನನ್ನು ವಿಶೇಷವಾಗಿ ಸ್ವಾಗತಿಸುತ್ತಾರೆ. ನಾನು ಭಾರತದಲ್ಲಿ ಇದ್ದ ಕಾರಣ ಇಲ್ಲಿ ಹೊಂದಿಕೊಳ್ಳಲು ನನಗೆ ಸಹಾಯವಾಯಿತು. ಏಕೆಂದರೆ ಭವಿಷ್ಯದಲ್ಲಿ ನಾನು ಗಗನಯಾತ್ರಿಯಾಗಿ ಅರ್ಜಿ ಸಲ್ಲಿಸಬೇಕಾದ ಭಾರತೀಯ ಕೌಶಲ್ಯಗಳು ಬೇಕಾಗುತ್ತವೆ ಎಂದು ನೆನೆಪಿಸಿಕೊಂಡರು.
Advertisement
ಕೇರಳ ಮೆನನ್ ಅವರ ತಂದೆಯ ಊರಾಗಿದ್ದು, ಮೆನನ್ ತಮ್ಮ ಪತ್ನಿಯನ್ನು ಸಹ ಕರೆದುಕೊಂಡು ಹೋಗಿ ಈ ಜಾಗಗಳನ್ನು ತೋರಿಸಿದ್ದರು. ಮೆನನ್ ಮಿನ್ನೇಸೋಟದ ಮಿನ್ನಿಯಾಪೋಲಿಸ್‍ನಲ್ಲಿ ಹುಟ್ಟಿ ಬೆಳೆದಿದ್ದು, ಪೋಲಿಯೊ ಲಸಿಕೆಯನ್ನು ಅಧ್ಯಯನ ಮಾಡಲು ಮತ್ತು ಬೆಂಬಲಿಸಲು ಅವರು ರೋಟರಿ ರಾಯಭಾರಿ ವಿದ್ವಾಂಸರಾಗಿ ಭಾರತದಲ್ಲಿ ಒಂದು ವರ್ಷ ಸೇವೆಯನ್ನು ಸಲ್ಲಿಸಿದ್ದರು. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು
ಮೆನನ್ ಅವರು 2014 ರಲ್ಲಿ ನಾಸಾ ಫ್ಲೈಟ್ ಸರ್ಜನ್ ಆಗಿ ವೃತ್ತಿಜೀವನವನ್ನು ಆರಂಭಿಸಿದ್ದು, ಸೂಯೆಜ್ 43 ಮತ್ತು ಸೂಯೆಜ್ 52 ಗೆ ಪ್ರಧಾನ ಸಿಬ್ಬಂದಿ ಶಸ್ತ್ರಚಿಕಿತ್ಸಕ ಮತ್ತು ಸೂಯೆಜ್ 52ಗೆ ಉಪ ಸಿಬ್ಬಂದಿ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ನಾಸಾದಲ್ಲಿ ಗಗನಯಾತ್ರಿ ಅಭ್ಯರ್ಥಿಯಾಗಿ ಎರಡು ವರ್ಷಗಳ ಆರಂಭಿಕ ಗಗನಯಾತ್ರಿ ತರಬೇತಿಯನ್ನು ಪೂರ್ಣಗೊಳಿಸಿದ್ದು, ಜನವರಿ 2022ರಂದು ಕರ್ತವ್ಯಕ್ಕೆ ರಿಪೋಟ್ ಮಾಡಿಕೊಳ್ಳುತ್ತಿದ್ದಾರೆ.