ಬೆಂಗಳೂರು: ತಪ್ಪು ಮಾಡಿದವರು ಆರೋಪಿ ಸ್ಥಾನದಲ್ಲಿದ್ರೆ, ವಿಚಾರಣೆ ಮಾಡಬೇಕಿದ್ದವರು ನ್ಯಾಯಪಾಲಕರ ಸ್ಥಾನದಲ್ಲಿ ಇರ್ತಾರೆ. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ. ಇವರ ವಿರುದ್ಧ ಲೋಕಾಯುಕ್ತದಲ್ಲಿ 8 ಕೇಸ್ ದಾಖಲಾಗಿದ್ದು ವಿಚಾರಣೆ ಮಾಡೋದು ಕೂಡ ಇವರೇ.
Advertisement
ಹೌದು. ಪ್ರಸ್ತುತ ಲೋಕಾಯುಕ್ತದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿರೋ ನಾಗೇಶ್ ರೆಡ್ಡಿ ಈ ಹಿಂದೆ ರಾಜಾಜಿನಗರದ ಬಿಬಿಎಂಪಿ ಕಚೇರಿಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು. ಈ ವೇಳೆ ಸಾಕಷ್ಟು ಅವ್ಯವಹಾರ ಮಾಡಿರೋ ಆರೋಪದ ಮೇಲೆ ನಾಗೇಶ್ ವಿರುದ್ಧ ಲೋಕಾಯುಕ್ತದಲ್ಲೇ 8 ದೂರುಗಳಿವೆ. ವಿಪರ್ಯಾಸ ಅಂದ್ರೆ ನಾಗೇಶ್ ರೆಡ್ಡಿ ಈಗ ಲೋಕಾಯುಕ್ತ ಸಂಸ್ಥೆಯಲ್ಲೇ ಸಹಾಯಕ ಎಂಜಿನಿಯರ್ ಆಗಿದ್ದಾರೆ. ತನ್ನ ಮೇಲಿನ ಕೇಸನ್ನ ತಾನೇ ವಿಚಾರಣೆ ಮಾಡಿ 2 ಕೇಸ್‍ಗಳನ್ನು ಖುಲಾಸೆಗೊಳಿಸಿದ್ದಾರೆ.
Advertisement
Advertisement
ನಾಗೇಶ್ ರೆಡ್ಡಿ ವಿರುದ್ಧ ಲೋಕಾಯುಕ್ತ ರಿಜಿಸ್ಟಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 9 ಪತ್ರಗಳನ್ನ ಬರೆದಿದ್ದಾರೆ. ಇವರ ಸೇವೆ ನಮಗೆ ಅಗತ್ಯವಿಲ್ಲ. ನಾಗೇಶ್ ರೆಡ್ಡಿಯನ್ನ ಸೇವೆಯಿಂದ ಹಿಂಪಡೆಯಬೇಕು ಅಂತ ಮನವಿ ಮಾಡಿದ್ದಾರೆ. ಆದ್ರೆ ಸರ್ಕಾರ ಮಾತ್ರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಆರ್‍ಟಿಐ ಕಾರ್ಯಕರ್ತ ಭಾಸ್ಕರ್ ಆರೋಪಿಸಿದ್ದಾರೆ.