ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸೌಮ್ಯಾರನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಹೆಚ್ಚಿನ ತನಿಖೆ ನಡೆಸುವ ಅವಶ್ಯಕತೆ ಇದ್ದು, ಸೌಮ್ಯಾರನ್ನು ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿಕೊಂಡಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಒಂದನೇ ಎಸಿಎಂಎಂ ನ್ಯಾಯಾಧೀಶರಾದ ಮಧು ಅವರು ಈ ಆ ಆದೇಶ ನೀಡಿದ್ದಾರೆ. ಇದನ್ನೂ ಓದಿ: ದಿವ್ಯಾ ಹಾಗರಗಿ ಬಂಧನ ಯಾವಾಗ? – ಪ್ರಭಾವಿಗಳ ಶ್ರೀರಕ್ಷೆಯಲ್ಲಿದ್ದಾರಾ ದಿವ್ಯಾ
Advertisement
Advertisement
ಪರೀಕ್ಷೆ ದಿನ ಎಲ್ಲರ ಹಾಜರಾತಿಗೂ ಮೊದಲು ಪರೀಕ್ಷಾ ಕೇಂದ್ರ ಉಸ್ತುವಾರಿಗಳು ಹಾಜರಿರುತ್ತಾರೆ. ಅಂದರೆ 40 ನಿಮಿಷ ಮೊದಲು ವಿದ್ಯಾರ್ಥಿಗಳಿಗಿಂತ ಮುಂಚೆ ಪ್ರಶ್ನೆಪತ್ರಿಕೆ ಕೊಠಡಿ ಇನ್ವಿಜಿಲೇಟರ್‌ಗೆ ಸಿಕ್ಕಿರುತ್ತದೆ. ಈ ಅವಧಿಯಲ್ಲಿ ಸೌಮ್ಯಾರಿಗೆ ಪ್ರಶ್ನೆಪತ್ರಿಕೆ ಸಿಕ್ಕಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
Advertisement
ಕೆಲ ಪ್ರಶ್ನೆಗಳನ್ನು ಅಭ್ಯರ್ಥಿಗಳಿಗೆ ಸೌಮ್ಯಾ ಕಳುಹಿಸಿರಬಹುದು. 18 ಪ್ರಶ್ನೆಗಳು ಮೊಬೈಲ್ ಸ್ಕ್ರೀನ್‌ಶಾಟ್‌ನಲ್ಲಿದ್ದು 11 ಪ್ರಶ್ನೆಗಳು ಒಂದೇ ಥರ ಇದ್ದವು. ಸದ್ಯ ಇದೇ ಆಂಗಲ್‌ನಲ್ಲಿ ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹಗರಣದಲ್ಲಿ ಪ್ರಾಧ್ಯಾಪಕರೊಬ್ಬರ ಪಾತ್ರ ಇದೆ ಎನ್ನಲಾಗುತ್ತಿದ್ದು, ಪ್ರಕರಣವನ್ನು ಮುಚ್ಚಿಡುವ ಯತ್ನ ಕೂಡ ನಡೆಯುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಸಮನ್ಸ್ ಕಳುಹಿಸಿದರೆ ಅಲ್ಲಿಗೆ ಬಂದು ಉತ್ತರಿಸಬೇಕಿತ್ತು: ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಕಿಡಿ