ಕಲಬುರಗಿ: ಆಯುಧ ಪೂಜೆ (Ayudha Pooja) ಯಂದು ಗಾಳಿಯಲ್ಲಿ ಗುಂಡು ಹಾರಿಸಿದ ವೀಡಿಯೋ ವೈರಲ್ (Viral Video) ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಂಗರಾಜಪ್ಪ ಅಪ್ಪಗೆ ನೋಟಿಸ್ ನೀಡಲಾಗಿದೆ.
ದಕ್ಷಿಣ ವಿಭಾಗದ ಪೋಲಿಸ್ ಸಹಾಯಕ ಆಯುಕ್ತರು ಈ ನೋಟಿಸ್ (Notice) ನೀಡಿದ್ದಾರೆ. ಗನ್ ಪಿಸ್ತೂಲ್ ಗಳ ಲೈಸೆನ್ಸಿನ ಪ್ರತಿ ಪ್ರಸ್ತುತ ಪಡಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ಅಲ್ಲದೆ ಶಸ್ತ್ರಾಸ್ತ್ರಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಂದ ಆಯುಧದ ಲೈಸೆನ್ಸ್ ಪ್ರತಿಯೊಂದಿಗೆ ವಿವರಣೆಯನ್ನು ಸಲ್ಲಿಸುಂತೆ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಜನಸಾಮಾನ್ಯರಿಗೆ ಕೈಯಾರೆ ಊಟ ಬಡಿಸಿದ ಸಿಎಂ ಬೊಮ್ಮಾಯಿ
Advertisement
Advertisement
ವಿಜಯದಶಮಿ ಹಬ್ಬದ ದಿನ ವಿಶ್ವ ಹಿಂದೂ ಪರಿಷತ್(VHP) ನ ಉತ್ತರ ಕರ್ನಾಟಕದ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ (Lingarajappa Appa) ಎರಡು ಬಂದೂಕುಗಳಿಂದ ಹಲವು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗೋದುತಾಯಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬನ್ನಿ ಮುಡಿಯುವ ಮುನ್ನ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಎರಡು ಬಂದೂಕುಗಳಿಂದ 8 ಸುತ್ತು ಗುಂಡು ಹಾರಿಸಲಾಗಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.