ಲಕ್ನೋ: ಜನರು ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನು ಮತ ಹಾಕಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಕ್ನೋನಲ್ಲಿರುವ ಬಿಜೆಪಿ ಕಛೇರಿಯಲ್ಲಿ ಮಾತನಾಡಿದ ಅವರು, ಮೊದಲು ನಾನು ಪ್ರಧಾನಿ ಮೋದಿ, ರಾಜ್ಯಧ್ಯಕ್ಷರು, ಗೃಹಮಂತ್ರಿಗಳು ಮತ್ತು ಕಾರ್ಯಕರ್ತರು ಎಲ್ಲರಿಗೂ ಧನ್ಯವಾದವನ್ನು ಅರ್ಪಿಸುತ್ತೇನೆ. ನಾಲ್ಕು ರಾಜ್ಯದಲ್ಲಿ ನಮ್ಮ ಪಕ್ಷದ ಪ್ರಚಂಡ ಗೆಲುವು ನೋಡಿ ಖುಷಿಯಾಗಿದೆ. ಉತ್ತರಪ್ರದೇಶದ ಮೇಲೆ ಎಲ್ಲ ರಾಜ್ಯಗಳ ಕಣ್ಣು ಇತ್ತು. ಈಗ ದೊಡ್ಡಮಟ್ಟದ ಯಶಸ್ಸುವನ್ನು ನಮ್ಮ ಪಕ್ಷ ಸಾಧಿಸಿರುವುದು ತುಂಬಾ ಸಂತೋಷವಾಗುತ್ತಿದೆ ಎಂದರು. ಇದನ್ನೂ ಓದಿ: ನಾನು ಆತಂಕವಾದಿಯಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ: ಕೇಜ್ರಿವಾಲ್
Advertisement
भारतीय जनता पार्टी प्रदेश मुख्यालय में… https://t.co/jAQm3W04Py
— Yogi Adityanath (@myogiadityanath) March 10, 2022
Advertisement
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರವು ಯುಪಿಗೆ ಸುರಕ್ಷಿತ ವಾತಾವರಣವನ್ನು ನೀಡಿತು. ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಬಡವರಿಗಾಗಿ ಯೋಜನೆಗಳನ್ನು ರೂಪಿಸಿ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
Advertisement
ಬಿಜೆಪಿ ಕುಟುಂಬದ ಪರವಾಗಿ ನಿಮಗೆ ಈ ಗೆಲುವನ್ನು ಅರ್ಪಿಸುತ್ತಿದ್ದೇನೆ. ಇದೇ ಮೊದಲ ಬಾರಿಗೆ ಶಾಂತಾ ರೀತಿಯಲ್ಲಿ ಮತ ಏಣಿಕೆ ನಡೆದಿದೆ. ನಮ್ಮ ತಂತ್ರದ ಫಲವಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ವಿವರಿಸಿದರು.
Advertisement
ಭ್ರಷ್ಟಚಾರ ಮುಕ್ತ ಸರ್ಕಾರಕ್ಕೆ ಜನರು ಮತನೀಡಿದ್ದಾರೆ. ಜನರು ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ಮತದಾನ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಜನರು ನಮ್ಮ ನಿಯಮಗಳನ್ನು ಪಾಲಿಸಿ ಸಹಾಯ ಮಾಡಿದ್ದಾರೆ. ಇಂದು ಜನರು ಒಳ್ಳೆಯ ಕೆಲಸಕ್ಕೆ ತಕ್ಕ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ಹೇಳಿದರು.
ಕೋವಿಡ್ ಸಮಯದಲ್ಲಿ ನಮ್ಮ ಎಲ್ಲ ಕಾರ್ಯಕರ್ತರು ಯಾವುದೇ ರೀತಿಯ ವಿಶ್ರಾಂತಿಯನ್ನು ಪಡೆಯದೆ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದಾರೆ. ಅದೇ ಈ ಯಶಸ್ಸಿಗೆ ಕಾರಣವಾಗಿದೆ. ಒಬ್ಬೊಬ್ಬ ಕಾರ್ಯಕರ್ತನಿನೂ ಈ ಗೆಲುವಿನ ಹಕ್ಕಿದೆ. ದೇಶವೇ ಮೆಚ್ಚುವ ಪ್ರಧಾನಿ ಮೋದಿ ಅವರ ಮಾರ್ಗದರ್ಶನ, ನೇತೃತ್ವದಲ್ಲಿ ಕಳೆದ 5 ವರ್ಷಗಳಿಂದ ಸರ್ಕಾರ ನಡೆಸಲಾಗುತ್ತಿದೆ. ಅದರ ಫಲಿತಾಂಶ ಇಂದು ನಿಮ್ಮ ಕಣ್ಣಮುಂದೆಯೇ ಇದೆ ಎಂದು ತಿಳಿಸಿದರು.
ಉತ್ತರಪ್ರದೇಶದಲ್ಲಿ ಬಡವರಿಗಾಗಿ ಶೌಚಲಯ, ಎಲ್ಲರೀತಿಯ ಸೌಲಭ್ಯಗಳನ್ನು ನೀಡಿದ್ದೇವೆ. ಅವರಿಗಾಗಿ ಹಲವು ಯೋಜನೆಗಳನ್ನು ನಮ್ಮ ಸರ್ಕಾರ ಮಾಡಿದೆ. ನಮ್ಮ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹಲವು ಟೀಕೆಗಳನ್ನು ಮಾಡುತ್ತಿತ್ತು. ನಮ್ಮ ಬಗ್ಗೆ ಅವಹೇಳನಕಾರಿಯಾದ ಸಂದೇಶವನ್ನು ಕೊಟ್ಟಿದ್ದರು. ಆದರೆ ಇಂದು ಜನರೇ ಅವರಿಗೆ ಉತ್ತರ ಕೊಟ್ಟಿದ್ದಾರೆ ಎಂದು ಜನರಿಗೆ ಕೈ ಮುಗಿದು ವಂದಿಸಿದರು. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ
ನಮ್ಮ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರ ಬಾಯಿಯನ್ನು ಮತದಾರರು ಮುಚ್ಚಿಸಿದ್ದಾರೆ. ನಮ್ಮ ಕಾರ್ಯಕ್ಕೆ ಜನರು ಇಂದು ತೀರ್ಪು ಕೊಟ್ಟಿದ್ದಾರೆ. ಈ ಸಲ ನಮ್ಮ ಪಕ್ಷ ಇನ್ನು ಹೆಚ್ಚು ಶ್ರಮವಹಿಸಿ ಜನರಿಗಾಗಿ ಒಳ್ಳೆಯ ಕೆಲಸ ಮಾಡಲಿದೆ ಎಂದರು.