ಬಿಜೆಪಿ (BJP) ಸರಕಾರದ ವಿರುದ್ಧ ಟೀಕಿಸುತ್ತಲೇ ಬಂದಿರುವ ಗುಡುಗುವ ನಟ ಪ್ರಕಾಶ್ ರಾಜ್ (Prakash Raj), ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಈ ಬಾರಿ ಬಿಜೆಪಿ ಸೋತಿರುವುದಕ್ಕೆ ಭಿನ್ನ ರೀತಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಅಮಿತ್ ಶಾ ಎತ್ತಿನ ಬಂಡೆ ಓಡಿಸುತ್ತಿರುವ ಮತ್ತು ಎತ್ತಿನ ಬಂಡೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಯೋಗಿ ಆದಿತ್ಯನಾಥ್ (Yogi Adityanath) ಗಂಟುಮೂಟೆ ಕಟ್ಟಿಕೊಂಡು ಹೊರಡುವಂತಹ ಪೋಟೋ ಶೇರ್ ಮಾಡಿರುವ ಅವರು, ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಖಡಕ್ ಅಕ್ಷರಗಳಿಂದ ಅಲಂಕರಿಸಿದ್ದಾರೆ.
Advertisement
ಬಿಜೆಪಿ ಬಾವುಟದಿಂದಲೇ ಗಂಟು ಮೂಟೆ ಕಟ್ಟಿಕೊಂಡು ಮೂವರು ಹೊರಡುವಂತಹ ಪೋಸ್ಟರ್ ಶೇರ್ ಮಾಡಿ, ‘ದ್ವೇಶ, ಬೂಟಾಟಿಕೆಯನ್ನು ಒದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು. ಬೆತ್ತಲೆಯಾದ ಚಕ್ರವತಿ. ಜಸ್ಟ್ ಆಸ್ಕಿಂಕ್’ ಎಂದು ಬರೆದಿದ್ದಾರೆ. ಪ್ರಕಾಶ್ ರಾಜ್ ಮಾಡಿರುವ ಈ ಟ್ವೀಟ್ ಭಾರಿ ವೈರಲ್ ಕೂಡ ಆಗಿದೆ.
Advertisement
Thank you Karnataka for Kicking OUT Hatred and Bigotry ..The Emperor is NAKED … ದ್ವೇಶ…ಬೂಟಾಟಿಕೆಯನ್ನು …ಓದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ದನ್ಯವಾದಗಳು …..ಬೆತ್ತಲೆಯಾದ ಚಕ್ರವರ್ತಿ.#justasking pic.twitter.com/pVD4GuuaQO
— Prakash Raj (@prakashraaj) May 13, 2023
Advertisement
ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ಬಂದಿದ್ದು, ಮೋದಿ ಅಭಿಮಾನಿಗಳು ಪ್ರಕಾಶ್ ರಾಜ್ ಅವರನ್ನು ತರಾಟೆಗೆ ತಗೆದುಕೊಂಡಿದ್ದರೆ, ಪ್ರಕಾಶ್ ರಾಜ್ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಸತ್ಯದ ಪರವಾಗಿ ಮಾತನಾಡಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.
Advertisement
ಮೇ 11ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಟ್ಲರ್ ಫೋಟೋವನ್ನು ಶೇರ್ ಮಾಡಿದ್ದ ಪ್ರಕಾಶ್ ರಾಜ್ , ‘ಕರ್ನಾಟಕ ನೋಡಿದ್ದೇನು? ವಿದೂಶಕನ ವೇಷವನ್ನೇ.. ಅವನ ಬೆತ್ತಲೆತನವನ್ನೇ.. 13ರಂದು ಬಿಡುಗಡೆ’ ಎಂದು ಬರೆದಿದ್ದರು. ಅದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇಂದು ಮಾಡಿದ ಟ್ವೀಟ್ ಕೂಡ ಅಷ್ಟೇ ವಾದ ವಿವಾದಕ್ಕೆ ಕಾರಣವಾಗಿದೆ.