– ಏನಿಲ್ಲ ಏನಿಲ್ಲ ಮಳೆಗಾಲಕ್ಕೆ ಪರಿಹಾರ ಏನಿಲ್ಲ, ಅನುದಾನ ಬರಲ್ಲ: ಬಿಜೆಪಿ ಲೇವಡಿ
– ಬಣ್ಣ ಹಚ್ಚಿಕೊಂಡು ಕುಣಿಯಿರಿ ಅಂತ ಶಿವಲಿಂಗೇಗೌಡ ಕಿಡಿ
ಬೆಂಗಳೂರು: ವಿಧಾನಸಭೆಯ ಕಲಾಪದ (Assembly Session) ವೇಳೆ ಗದ್ದಲ ಮಾಡಿದ ಬಿಜೆಪಿ ಶಾಸಕರಿಗೆ ಇದೇನು ನಿಮ್ಹಾನ್ಸಾ ಅಥವಾ ವಿಧಾನಸಭೆನಾ? ಅಂತ ಸ್ಪೀಕರ್ ಯು.ಟಿ ಖಾದರ್ (U.T. Khader) ಗರಂ ಆದ ಪ್ರಸಂಗ ನಡೆದಿದೆ.
ವಿಧಾನಸಭೆಯಲ್ಲಿ ಗದ್ದಲದ ನಡುವೆಯೇ ಮಳೆಹಾನಿ ಚರ್ಚೆಗೆ ಸ್ಪೀಕರ್ ಅವಕಾಶ ಕೊಟ್ಟರು. ಈ ವೇಳೆ ಶಾಸಕ ಪೊನ್ನಣ್ಣ ಚರ್ಚೆ ಆರಂಭಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕರು ಚಪ್ಪಾಳೆ ತಟ್ಟಿ ಘೋಷಣೆ ಕೂಗಿದರು. ಅಲ್ಲದೇ `ಏನಿಲ್ಲ ಏನಿಲ್ಲ ಮಳೆಗಾಲಕ್ಕೆ ಪರಿಹಾರ ಏನಿಲ್ಲ, ಅನುದಾನ ಬರಲ್ಲ’ ಅಂತ ಪ್ರತಿಪಕ್ಷದ ಸದಸ್ಯರು ಹಾಡು ಹೇಳಿ ಗದ್ದಲ ಎಬ್ಬಿಸಿದರು. ಈ ವೇಳೆ ಇದು ಯಾವ ನಾಟಕದ ಕಂಪನಿ? ಅಂತ ಸ್ಪೀಕರ್ ಸಿಡಿಮಿಡಿಗೊಂಡರು. ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಚಿನ್ನ ಇದ್ದ ಬ್ಯಾಗನ್ನು ಪಕ್ಕದ ಮನೆಗೆ ಎಸೆದ ಅಧಿಕಾರಿ
ಇದೇ ವೇಳೆ ಭೋವಿ ನಿಗಮದ ಅಕ್ರಮದ ಬಗ್ಗೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ (Shivalinge Gowda) ಪ್ರಸ್ತಾಪ ಮಾಡಿದರು. 220 ಕೋಟಿ ರೂ. ಅಕ್ರಮ ಮಾಜಿ ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಕಾಲದಲ್ಲಿ ಆಗಿದೆ ಎಂದು ಪೇಪರ್ ಕಟ್ಟಿಂಗ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಎಲ್ಲಾ ಕಡೆ ಮಳೆಯಾಗಿ ಸಮಸ್ಯೆ ಆಗ್ತಿದೆ. ಅದನ್ನು ಬಿಟ್ಟು ಕ್ಷುಲ್ಲಕ ರಾಜಕಾರಣ ಮಾಡ್ತಿದ್ದಾರೆ, ನಾಚಿಕೆ ಆಗಬೇಕು ಇವರಿಗೆ. ವಾಲ್ಮೀಕಿ ನಿಗಮದಲ್ಲಿ ಅಚಾತುರ್ಯ ನಡೆದು ಹೋಗಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸ್ತಾರೆ. ನಿಮಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ತಾಕತ್ ಇದ್ದರೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಮುಂದುವರಿದು, ನಿಮ್ಮನ್ನೂ ಅಷ್ಟು ಸುಲಭವಾಗಿ ಬಿಡುವುದಿಲ್ಲ. ಲೋಕಸಭೆಯಲ್ಲಿ ವಿರೋಧ ಪಕ್ಷಗಳನ್ನು ಹೊರಗಿಟ್ಟು ಸದನ ನಡೆಸಲಿಲ್ಲವಾ? ಹಾಗೇ ಇವರನ್ನೂ ಹೊರಗೆ ಇಟ್ಟು ಸದನ ನಡೆಸಿ ಅಧ್ಯಕ್ಷರೇ. ನಿಮಗೆ ಆತ್ಮಸಾಕ್ಷಿ ಇದೆಯಾ? ನೈತಿಕತೆ ಇದೆಯಾ? ಗೌರವ ಇದೆಯಾ? ಎಲ್ಲಾ ನಿಗಮಗಳ ಅಕೌಂಟ್‍ನ್ನು ಸಿಎಂ ಹೋಗಿ ನೋಡೋಕೆ ಆಗುತ್ತಾ? ಸಿಎಂ ಹೇಗೆ ವಾಲ್ಮೀಕಿ ಹಗರಣದ ಜವಬ್ದಾರಿ ಆಗ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತು ಪ್ರತಿಪಕ್ಷಗಳಿಗೆ ತಿರುಗೇಟು ಕೊಟ್ಟರು.
ಬಿಜೆಪಿ ಶಾಸಕರು ಹಾಡು ಹೇಳಿದ ವಿಚಾರವಾಗಿ ಅವರು, ಬಣ್ಣ ಹಚ್ಕೊಂಡಾದ್ರೂ ಕುಣೀರಿ. ಎಲ್ಲರೂ ಬಣ್ಣ ಹಚ್ಚಿಕೊಂಡು ನಾಟಕ ಮಾಡಿದ್ರೆ, ನೀವು ಬಣ್ಣ ಹಚ್ಚದೇ ನಾಟಕ ಮಾಡ್ತೀರಿ. ನಾಟಕ ಸಾಕು ಕುಳಿತುಕೊಳ್ಳಿ ಎಂದು ಬಿಜೆಪಿ ಶಾಸಕರಿಗೆ ತಿರುಗೇಟು ಕೊಟ್ಟರು.
ಇದೇ ವೇಳೆ ಅತಿವೃಷ್ಠಿಯ ಬಗ್ಗೆ ಶಾಸಕ ಆರ್.ವಿ ದೇಶಪಾಂಡೆ ಚರ್ಚೆ ಆರಂಭಿಸಿ ಉತ್ತರಕನ್ನಡದಲ್ಲಿ ಗುಡ್ಡ ಕುಸಿತದ ಬಗ್ಗೆ ಮಾತು ಆರಂಭಿಸಿದರು. ಈ ವೇಳೆ ವಿರೋಧ ಪಕ್ಷದ ನಾಯಕ ಅಶೋಕ್ `ಏನಿಲ್ಲ ಏನಿಲ್ಲ ದೇಶಪಾಂಡೆಗೆ ಮಂತ್ರಿ ಸ್ಥಾನವಿಲ್ಲ’ ಎಂದು ಲೇವಡಿ ಮಾಡಿದರು. ಅಲ್ಲದೇ ವಾಲ್ಮೀಕಿ ಹಗರಣದ (Valmiki Corporation Scam) ಬಗ್ಗೆ ಮಾತನಾಡಿ ಎಂದು ಅವರು ಆಗ್ರಹಿಸಿದರು. ಇದನ್ನೂ ಓದಿ: ಸದನದಲ್ಲಿ `ಒಂದು ಮೊಟ್ಟೆಯ ಕಥೆ’; ನಾನಂತೂ ಮೊಟ್ಟೆ ತಿನ್ನಲ್ಲ, ಮುಟ್ಟೋದೂ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್