ಬೆಂಗಳೂರು: ವಿಧಾನಸಭೆಯಲ್ಲಿ ಇವತ್ತು ಆರ್‌ಎಸ್‍ಎಸ್ ಸದ್ದು ಜೋರಾಗಿಯೇ ಇತ್ತು. ಬಸವರಾಜ ಬೊಮ್ಮಾಯಿ ಆರ್‍ಎಸ್‍ಎಸ್ ಪ್ರಭಾವ ಬೀಸಿದೆ. ಇದೊಂದು ಆರ್‌ಎಸ್‍ಎಸ್ ಬಜೆಟ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಬಸವರಾಜ ಬೊಮ್ಮಯಿ ನನ್ನ ಒಳ್ಳೆಯ ಸ್ನೇಹಿತ. ನನಗೆ ತುಂಬಾ ನೀರಿಕ್ಷೆ ಇತ್ತು. ನನ್ನ ಭರವಸೆ ಹುಸಿಯಾಗಿದೆ. ಅವರ ತಂದೆಯ ಮಾರ್ಗದಲ್ಲಿ ನಡೆಯುತ್ತಾರೆ ಎಂದು ಕೊಂಡಿದ್ದೆ. ಆದರೆ ಆರ್‍ಎಸ್‍ಎಸ್ ಪ್ರಭಾವ ಬೀರಿದೆ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಮಂಡನೆ ಮಾಡಿದರೆ ಅವರಿಗೆ ಆರ್‌ಎಸ್‍ಎಸ್ ಪ್ರಭಾವ ಇದೆ ಎಂದು ಹೇಳಬಹುದಿತ್ತು. ಯಡಿಯೂರಪ್ಪ ಬಿಜೆಪಿ ಆರ್‍ಎಸ್‍ಎಸ್ ಮೂಲಕ ಬಂದಿರುವವರು. ಆದರೆ ಬೊಮ್ಮಯಿ 2008ರಲ್ಲಿ ಬಿಜೆಪಿಗೆ ಬಂದಿದ್ದು, ಇವರಿಗೆ ಆರ್‍ಎಸ್‍ಎಸ್ ಪ್ರಭಾವ ಇರಲ್ಲ. ಒಳ್ಳೆಯ ಬಜೆಟ್ ಕೊಡುತ್ತಾರೆ ಎಂದು ನೀರಿಕ್ಷೆ ಇತ್ತು, ಆದರೆ ನಿರೀಕ್ಷೆ ಹುಸಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶ ಮಾಡಿ ನೀವು ಫ್ರೆಂಡ್ ಎಂದು, ಅವರನ್ನು ಹೀಗೆ ಟೀಕೆ ಮಾಡ್ತಿದ್ದೀರಿ ಎಂದಾಗ ಸಿದ್ದರಾಮಯ್ಯ ತಿರುಗೇಟು ನೀಡಿದರು. ಸ್ನೇಹ ಬೇರೆ ರಾಜಕಾರಣ ಬೇರೆ, ಸಿದ್ಧಾಂತ ಬೇರೆ. ನೀವು ಆರ್‌ಎಸ್‍ಎಸ್, ಆರ್‌ಎಸ್‍ಎಸ್‍ನಿಂದ ಬಂದವರು, ನಿಮ್ಮ ವೈಚಾರಿಕ ಸಿದ್ಧಾಂತ ಬೇರೆ, ನಮ್ಮ ಸಿದ್ಧಾಂತ ಬೇರೆ. ಹೊರಗೆ ಸ್ನೇಹ ಇದ್ದೇ ಇರುತ್ತೆ, ಇಲ್ಲಿ ರಾಜಕಾರಣ ಇದ್ದೇ ಇರುತ್ತೆ ಎಂದು ಸ್ಪೀಕರ್‌ಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಇದನ್ನೂ ಓದಿ: ದೇಶ ದ್ರೋಹಿಗಳಂದ್ರೆ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಅಂದ್ರೆನೆ ದೇಶ ದ್ರೋಹ: ಚೈತ್ರಾ ಕುಂದಾಪುರ
ಇದೇ ವೇಳೆ ಸಚಿವ ಆರ್. ಆಶೋಕ್ ಮಧ್ಯಪ್ರವೇಶ ಮಾಡಿ, ಬಸವರಾಜ ಬೊಮ್ಮಾಯಿ ನಮಗಿಂತಲೂ ಅವರೇ ಈಗ ಹೆಚ್ಚು ಆರ್‌ಎಸ್‍ಎಸ್ ಸಿದ್ಧಾಂತ ಫಾಲೋ ಮಾಡ್ತಾರೆ. ಆರ್‌ಎಸ್‍ಎಸ್ ಒಂದು ಸಂಸ್ಥೆ, ರಾಜಕೀಯ ಪಕ್ಷವಲ್ಲ ಎಂದರು. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಇದು: ಸಿದ್ದು ಕಿಡಿ
ಆಗ ಸಿದ್ದರಾಮಯ್ಯ ತಕ್ಷಣವೇ ಎಸ್ ಅಶೋಕ್.. ಯು ಆರ್ ಕರೆಕ್ಟ್. ಇದು ಆರ್‌ಎಸ್‍ಎಸ್ ಬಜೆಟ್ ಎಂದು ಕಾಲೆಳೆದರು. ಈಶ್ವರಪ್ಪ, ಅಶೋಕ್ ನೀವೆಲ್ಲ ಆರ್‌ಎಸ್‍ಎಸ್. ಆದರೆ ಬಸವರಾಜ ಬೊಮ್ಮಾಯಿ 2008ರ ಮೊದಲು ಅವರು ಆರ್‌ಎಸ್‍ಎಸ್ ಇರಲಿಲ್ಲ, ಬಿಜೆಪಿಗೆ ಬಂದು ಸಚಿವರಾದ್ರು, ಈಗ ಸಿಎಂ ಆಗಿದ್ದಾರೆ, ಆದರೆ ಆರ್‌ಎಸ್‍ಎಸ್ ಅಂತಾ ಇರುವ ನೀವೆಲ್ಲ ಸಿಎಂ ಆಗಲಿಲ್ಲ ಎಂದು ಸಿದ್ದರಾಮಯ್ಯ ಛೇಡಿಸಿದರು. ಇದನ್ನೂ ಓದಿ: ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ
ಇದೇ ವೇಳೆ ಶಾಸಕ ರಾಮಲಿಂಗಾರೆಡ್ಡಿ ಮಧ್ಯಪ್ರವೇಶಿಸಿ, ಈಗ ಸಚಿವರಾಗಿರೋರು 7 ಜನ ಬಿಟ್ಟರೆ ಉಳಿದ ಎಲ್ಲರೂ ಬೇರೆ ಪಕ್ಷದಿಂದ ಬಂದವರೇ ಎಂದು ಕಾಲೆಳೆದರು. ಮತ್ತೆ ಸಚಿವ ಆರ್.ಅಶೋಕ್ ಮಧ್ಯಪ್ರವೇಶ ಮಾಡಿ ನೀವು ಜನತಾದಳದಿಂದ ಬಂದವರು ಸಿಎಂ ಆಗಲಿಲ್ಲವಾ..? ಎಂದಾಗ ಖರ್ಗೆ ಅವರೇ ಆಗಿಲ್ಲ ಎಂದು ಬಿಜೆಪಿ ಶಾಸಕರು ಕೂಗಿದರು.
ಅಲ್ಲದೆ ದೇಶಪಾಂಡೆ, ರಾಮಲಿಂಗ ರೆಡ್ಡಿ ಅನೇಕರು ಸಿಎಂ ಆಗಿದ್ದಾರಾ.? ಜನ, ದೇವರ ಆಶಿರ್ವಾದ ಎಲ್ಲಾ ಇರಬೇಕು ಅಂತಾ ಆರ್. ಅಶೋಕ್ ಟಾಂಗ್ ಕೊಟ್ಟರು. ನೀನು ಟ್ರೈ ಮಾಡಿದ್ಯಾ, ಆದರೆ ಸಿಗಲಿಲ್ಲ ಅಷ್ಟೇ ಎಂದು ಸಿದ್ದರಾಮಯ್ಯ ಅಶೋಕ್ ಕಾಲೆಳೆದರು.