ಬೆಂಗಳೂರು: ವಿಧಾನಸಭೆಯಲ್ಲಿ (Assembly Session) ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok) ವಿರುದ್ಧ ಹಕ್ಕುಚ್ಯುತಿ ಮಂಡನೆ ಪ್ರಸ್ತಾಪ ಮಾಡಲಾಗಿದೆ. ಆರ್.ಅಶೋಕ್ ನಿಂದನೆ ಮಾಡಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಕ್ಕುಚ್ಯುತಿ ಪ್ರಸ್ತಾಪಿಸಿದರು.
ಬಡತನ, ಕಣ್ಣೀರು ಸುರಿಸಿ ನಾನು ವಿಧಾನಸಭೆಗೆ ಬಂದಿದ್ದೇನೆ. ನಾನು ಶ್ರೀಮಂತ ಕುಟುಂಬದಿಂದ ಬಂದವನಲ್ಲ. ನಾನು ಗೆದ್ದ ಕೂಡಲೇ ಹತ್ತು ಆಂಬ್ಯುಲೆನ್ಸ್‌ಗಳನ್ನು ಬಡವರಿಗಾಗಿ ಕೊಟ್ಟಿದ್ದೇನೆ. ನನ್ನ ಸ್ವಂತ ದುಡ್ಡಲ್ಲಿ ಜನರನ್ನು ಕಾಪಾಡುತ್ತಿದ್ದೇನೆ. ವಿರೋಧ ಪಕ್ಷದ ನಾಯಕರ ಮೇಲೆ ಗೌರವ ಇದೆ. ಅವರು ಶಾಸಕರ ಮೇಲೆ ಕೆಟ್ಟದಾಗಿ ಪದ ಬಳಕೆ ಮಾಡಿದ್ದಾರೆ. ಇದು ಸರೀನಾ ಎಂದು ಎಂದು ಪ್ರಶ್ನಿಸಿದ ಅವರು ಹಕ್ಕುಚ್ಯುತಿ ಮಂಡಿಸಿದರು. ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಸೈನಿಕರಿಗೆ ಅಪಮಾನ ಮಾಡಿದ್ದಾರೆ: ಹೆಚ್‌ಡಿಕೆ
ಹಕ್ಕುಚ್ಯುತಿ ಮಂಡನೆ ವಿಚಾರವಾಗಿ ಆರ್.ಅಶೋಕ್ ಮಾತನಾಡಿ, ಗೌರವಾನ್ವಿತ ಪ್ರದೀಪ್ ಈಶ್ವರ್ ಅವರು ನಾನು ಅವಾಚ್ಯ ಶಬ್ಧ ಬಳಸಿದೆ ಎಂದು ಹೇಳುತ್ತಿದ್ದಾರೆ. ನಾನು ದಾಖಲೆಗಳನ್ನು ಕೇಳಿದೆ ಆ ರೀತಿ ಯಾವುದು ಇಲ್ಲ. ಪ್ರದೀಪ್ ಈಶ್ವರ್ ಬಹಳ ದೊಡ್ಡ ದೊಡ್ಡ ಮಾತಾಡಿದ್ದಾರೆ. ನಾನು ಆ ರೀತಿ ಬಳಸಿದ್ದರೆ ದಾಖಲೆಗಳನ್ನು ಕೊಡಲಿ. ಹಾಗೆ ಬಳಸಿದ್ದರೆ ತಪ್ಪು ತಪ್ಪೇ ಎಂದರು. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪೋಸ್ಟ್ ಹಾಕಿಕೊಂಡಿದ್ದಾರೆ, ಅದರ ಬಗ್ಗೆ ಮಾತಾಡಲಿ ಎಂದು ಬಿಜೆಪಿ ಶಾಸಕರು ಇದೇ ವೇಳೆ ಟಾಂಗ್ ಕೊಟ್ಟರು.
ಬಳಿಕ ಸ್ಪೀಕರ್ ಖಾದರ್ ಮಧ್ಯ ಪ್ರವೇಶಿಸಿ ಹಕ್ಕುಚ್ಯುತಿ ಸ್ವೀಕಾರ ಮಾಡಬೇಕಾ? ಅಥವಾ ಮಾಡಬಾರದಾ? ಎಂಬ ಬಗ್ಗೆ ರೂಲಿಂಗ್ ಕಾಯ್ದಿರಿಸಿದರು. ನಾವು ಸದನದಲ್ಲಿ ನಮ್ಮ ಸ್ಟೇಟಸ್‍ನ್ನು ತೋರಿಸೋದು ಬೇಡ. ಅದನ್ನು ಹೊರಗೆ ಎಲ್ಲಿ ಮಾಡಬೇಕೋ ಅಲ್ಲಿ ಮಾಡೋಣ. ನಾನು ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ಮಾಡುತ್ತೇನೆ ಎಂದು ಸದನಕ್ಕೆ ತಿಳಿಸಿದರು. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ಇಡಿ ಕಸ್ಟಡಿ ಇಂದಿಗೆ ಅಂತ್ಯ