– 56 ಸಾವಿರ ಕಾರ್ಡ್ ಬಿಪಿಎಲ್‌ಗೆ ಅನರ್ಹ: ಸಚಿವ ಮುನಿಯಪ್ಪ
– ಪರಿಷತ್‌ನಲ್ಲಿ ನಿರೂಪಕಿ ದಿ. ಅಪರ್ಣಾ ಸೇರಿದಂತೆ ಗಣ್ಯರಿಗೆ ಸಂತಾಪ
ಬೆಂಗಳೂರು: ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ (Karnataka Assembly Session) ಇಂದಿನಿಂದ ಆರಂಭವಾಗಿದೆ. ಪರಿಷತ್‌ನಲ್ಲಿ ಮೊದಲ ದಿನವೇ ಹಗರಣಗಳ ಸದ್ದು ಪ್ರಸ್ತಾಪವಾಗಿದೆ. ಅಧಿವೇಶನದಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಾಲ್ಮೀಕಿ ನಿಗಮದ ಹಗರಣ (Valmiki Corporation Corruption) ವಿಚಾರ ಪ್ರಸ್ತಾಪವಾಗಿದೆ.
Advertisement
ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಭೋಜೇಗೌಡ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಸಭಾಪತಿ ಘೋಷಣೆ ಮಾಡಿದರು. ಬಳಿಕ ನಿಯಮ 59ರ ಅಡಿ ನಿಲುವಳಿ ಸೂಚನೆಗೆ ಪ್ರಸ್ತಾಪಿಸಲಾಯಿತು.ಈ ವೇಳೆ ಬಿಜೆಪಿ ಸದಸ್ಯ ಸಿ.ಟಿ ರವಿ (CT Ravi), ವಾಲ್ಮೀಕಿ ನಿಗಮದ ಹಗರಣ ಕುರಿತು ನಿಲುವಳಿ ಮಂಡಿಸಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ರವಿಕುಮಾರ್ ಸಹ ವಾಲ್ಮೀಕಿ ಹಗರಣದ 187 ಕೋಟಿ ರೂ. ಹಣವನ್ನು ಬಳ್ಳಾರಿ ಚುನಾವಣೆ (Bellary Lok Sabha Election) ಹಾಗೂ ತೆಲಂಗಾಣ ಚುನಾವಣೆಗೆ ಬಳಕೆ ಮಾಡಲಾಗಿದೆ. ದೊಡ್ಡ ಈ ಬಗ್ಗೆ ದೊಡ್ಡ ಚರ್ಚೆಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.
Advertisement
Advertisement
ಇದೇ ವೇಳೆ ಸಿ.ಟಿ ರವಿ ಸಹ, 187 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಿ. ಅಹಿಂದ ರಾಜಕಾರಣ ಮಾಡೋರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಣ ನುಂಗಿದ್ದಾರೆ. ಈ ಬಗ್ಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, ನಿಯಮದ ಪ್ರಕಾರ ನಾವು ಎಲ್ಲದಕ್ಕೂ ಸಮಯ ಕೊಡುತ್ತೇವೆ. ಪ್ರಶ್ನೋತ್ತರ ಅವಧಿ ಆದ್ಮೇಲೆ ವಿಷಯ ಪ್ರಸ್ತಾಪಕ್ಕೆ ಅವಕಾಶ ಕೊಡ್ತೀನಿ ಎಂದು ಹೇಳಿದರು.
Advertisement
ಬಿಪಿಎಲ್ ಕಾರ್ಡ್ ವಿಚಾರ ಪ್ರಸ್ತಾಪ:
ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಆಡಳಿತ ಕಾಂಗ್ರೆಸ್ ಪಕ್ಷದ ವಿರುದ್ಧ ಮುಗಿಬಿದ್ದರು. ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನಿಟ್ಟರು. ಪಡಿತರ ಚೀಟಿ ವಿವರಣೆ ಮಾಡಿ 3 ವರ್ಷ ಆಗಿದೆ. ಇದರಿಂದ ಬಡವರಿಗೆ ತೊಂದರೆಯಾಗಿದೆ, ಕೂಡಲೇ ಸರ್ಕಾರದಿಂದ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ (BPL Card) ವಿತರಿಸುವ ಕೆಲಸ ಆಗಬೇಕು. ಬಿಪಿಎಲ್ ಕಾರ್ಡ್ ಜೊತೆಗೆ ಎಪಿಎಲ್ ಕಾರ್ಡನ್ನೂ ಕೊಡಬೇಕು. ಬಿಪಿಎಲ್‌ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ನಿಂದ ಮೆಡಿಕಲ್ ಗೂ ಸಹಾಯ ಆಗಲಿದೆ. ಹೀಗಾಗಿ ಶೀಘ್ರವೇ ಪಡಿತರ ಚೀಟಿ ಕೊಡಿ ಎಂದು ಆಗ್ರಹಿಸಿರು.
1.73 ಲಕ್ಷ ಕಾರ್ಡ್ ಗಳ ಅಂತಿಮ ಹಂತದ ಪರಿಶೀಲನೆ:
ಇದಕ್ಕೆ ಉತ್ತರ ನೀಡಿದ ಸಚಿವ ಮುನಿಯಪ್ಪ, ಹಿಂದಿನ ಸರ್ಕಾರದಲ್ಲಿ ಚುನಾವಣೆಗೂ ಮುನ್ನ 2.95 ಲಕ್ಷ ಅರ್ಜಿಗಳು ಬಿಪಿಎಲ್‌ಗೆ ಬಂದಿದ್ದವು. ಈಪೈಕಿ 2.35 ಲಕ್ಷ ಕಾರ್ಡ್ ಬಿಪಿಎಲ್‌ಗೆ ಅರ್ಹತೆ ಪಡೆದಿದೆ. 56 ಸಾವಿರ ಕಾರ್ಡ್ ಬಿಪಿಎಲ್ ಅರ್ಹತೆ ಪಡೆದಿಲ್ಲ. ಅರ್ಹತೆ ಪಡೆದ 2.35 ಲಕ್ಷ ಕಾರ್ಡ್ ಪೈಕಿ 62 ಸಾವಿರ ಕಾರ್ಡ್ ಗಳಿಗೆ ಈಗಾಗಲೇ ಪಡಿತರ ಕೊಡ್ತಿದ್ದೇವೆ. ಉಳಿದ 1.73 ಲಕ್ಷ ಕಾರ್ಡ್ ಗಳ ಅಂತಿಮ ಹಂತದ ಪರಿಶೀಲನೆ ಕಾರ್ಯ ನಡೆಯುತ್ತಿದ್ದು ಶೀಘ್ರವೇ ಪಡಿತರ ಕೊಡುವ ವ್ಯವಸ್ಥೆ ಮಾಡಿಸ್ತೀವಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಪಡಿತರ ಚೀಟಿಗೆ ಅರ್ಜಿ ಹಾಕೋರಿಗೆ ಒಂದು ವಾರದಲ್ಲಿ ಪಡಿತರ ಚೀಟಿ ಕೊಡೋ ಕೆಲಸ ಮಾಡ್ತೀವಿ ಎಂದು ಭರವಸೆ ನೀಡಿದರು.
ಅರ್ಪಣಾ ನಿಧನಕ್ಕೆ ಸಂತಾಪ:
ಪರಿಷತ್ ಕಲಾಪ ಆರಂಭಿಸುವುದಕ್ಕೂ ಇತ್ತೀಚೆಗೆ ರಾಜ್ಯದಲ್ಲಿ ನಿಧನಹೊಂದಿದ ರಾಜಕೀಯ ನಾಯಕರು ಹಾಗೂ ಗಣ್ಯಮಾನ್ಯರಿಗೆ ಸಂತಾಪ ಸೂಚಿಸಲಾಯಿತು. ಪಾಟೀಲ ಸುನಂದಾ ನಿಂಗನಗೌಡ, ಟಿ.ಕೆ.ಚಿನ್ನಸ್ವಾಮಿ, ಇಕ್ಬಾಲ್ ಅಹಮದ್ ಸರಡಗಿ, ಎಂ.ಬಿ.ಭಾನು ಪ್ರಕಾಶ್, ನಾಗಮ್ಮ, ಕೇಶವಮೂರ್ತಿ, ವಿ.ಶ್ರೀನಿವಾಸ್ ಪ್ರಸಾದ್, ಎಂ.ಪಿ ಕೇಶವಮೂರ್ತಿ, ಪಾಡ್ಡನ ಕಲಾವಿದೆ ಗಿಡಿಗೆರೆ ರಾಮಕ್ಕ, ದ್ವಾರಕೀಶ್, ಭಗಾವತ ಸುಬ್ರಮಣ್ಯ ಧಾರೇಶ್ವರ, ಪೇತ್ರಿ ಮಾಧವ ನಾಯಕ್, ಕಮಲಾ ಹಂಪನಾ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.