– ಪಶ್ಚಿಮ ಬಂಗಾಳದಲ್ಲಿ 2 ಹಂತದಲ್ಲಿ ಚುನಾವಣೆ
ನವದೆಹಲಿ: 4 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಸ್ಸಾಂ, ತಮಿಳುನಾಡು,ಕೇರಳ, ಪಾಂಡಿಚೇರಿಯಲ್ಲಿ ಏ.9 ರಂದು ಚುನಾವಣೆ ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಚುನಾವಣೆ ನಡೆಯಲಿದೆ. ಏಪ್ರಿಲ್ 23 ರಂದು ಮೊದಲ ಹಂತ, ಏಪ್ರಿಲ್ 29 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಐದು ರಾಜ್ಯಗಳ ಮತ ಎಣಿಕೆ ಮೇ 4 ರಂದು ನಡೆಯಲಿದೆ.

ಪಶ್ಚಿಮ ಬಂಗಾಳ (West Bengal), ಅಸ್ಸಾಂ (Assam), ಕೇರಳ (Kerala), ತಮಿಳುನಾಡು (Tamil Nadu) ಹಾಗೂ ಪುದುಚೇರಿ (Puducherry) ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ. ಪಶ್ಚಿಮ ಬಂಗಾಳದಲ್ಲಿ ಮೇ 7 ರಂದು, ತಮಿಳುನಾಡಿನಲ್ಲಿ ಮೇ 10 ರಂದು, ಅಸ್ಸಾಂನಲ್ಲಿ ಮೇ 20 ರಂದು, ಕೇರಳದಲ್ಲಿ ಮೇ 23 ರಂದು ಮತ್ತು ಪಾಂಡಿಚೇರಿಯಲ್ಲಿ ಜೂನ್ 15 ರಂದು ವಿಧಾನಸಭೆಗಳ ಅವಧಿ ಕೊನೆಗೊಳ್ಳಲಿದೆ.

