ಕರ್ನೂಲ್: ಚುನಾವಣಾ ಪ್ರಚಾರದ ವೇಳೆ ಗಲಾಟೆ ಸಂಭವಿಸಿದ್ದಕ್ಕೆ ಅಂಗರಕ್ಷಕ ನೆಲಕ್ಕೆ ಹಾರಿಸಿದ ಗುಂಡು ಅಭ್ಯರ್ಥಿ ಹಾಗೂ ವ್ಯಕ್ತಿಯೊಬ್ಬರಿಗೆ ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕಗ್ಗಲ್ ಗ್ರಾಮದಲ್ಲಿ ನಡೆದಿದೆ.
ತೆಲುಗುದೇಶಂ ಪಕ್ಷದ (ಟಿಡಿಪಿ) ತಿಕ್ಕಾರೆಡ್ಡಿ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಅಭ್ಯರ್ಥಿ. ಮಂತ್ರಾಲಯ ವಿಧಾನಸಭಾ ಕ್ಷೇತ್ರದಿಂದ ತಿಕ್ಕಾರೆಡ್ಡಿ ಅವರು ಇಂದು ಕಗ್ಗಲ್ ಗ್ರಾಮದಲ್ಲಿ ಪ್ರಚಾರ ನಡೆಸಿದ್ದರು. ಈ ವೇಳೆ ಘಟನೆ ಸಂಭವಿಸಿದೆ.
Advertisement
ಆಗಿದ್ದೇನು?:
ಮಂತ್ರಾಲಯ ವಿಧಾನಸಭಾ ಕ್ಷೇತ್ರದ ಮತದಾನ ಏಪ್ರಿಲ್ 11ಕ್ಕೆ ನಡೆಯಲಿದೆ. ಹೀಗಾಗಿ ಟಿಡಿಪಿ ಕಾರ್ಯಕರ್ತರು ಹಾಗೂ ಅಭ್ಯರ್ಥಿ ತಿಕ್ಕಾರೆಡ್ಡಿ ಪ್ರಚಾರ ಮಾಡುತ್ತಿದ್ದರು. ಈ ವೇಳೆ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಟಿಡಿಪಿ ಬಾವುಟಗಳನ್ನು ಕಿತ್ತು ಹಾಕಿದ್ದಾರೆ. ಇದರಿಂದಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಜಗಳವಾಗಿದೆ.
Advertisement
Advertisement
ಟಿಡಿಎಸ್ ಅಭ್ಯರ್ಥಿ ತಿಕ್ಕಾರೆಡ್ಡಿ ಜಗಳವನ್ನ ಬಿಡಿಸಲು ಹೋದಾಗ ಪರಸ್ಥಿತಿ ಕೈಮೀರಿತ್ತು. ತಕ್ಷಣವೇ ತಿಕ್ಕಾರೆಡ್ಡಿ ಅಂಗರಕ್ಷಕ ಎರಡು ಸುತ್ತು ಗಾಳಿಯಲ್ಲಿ ಹಾಗೂ ಮೂರು ಸುತ್ತು ನೆಲಕ್ಕೆ ಗುಂಡು ಹಾರಿಸಿದ್ದಾರೆ. ನೆಲಕ್ಕೆ ಹಾರಿಸಿದ ಗುಂಡುಗಳು ತಿಕ್ಕಾರೆಡ್ಡಿ ಹಾಗೂ ಎಎಸ್‍ಐ ವೇಣುಗೋಪಾಲ್ ಅವರಿಗೆ ತಗುಲಿ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
ಈ ಘಟನೆಯಿಂದಾಗಿ ಕಗ್ಗಲ್ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸ್ ಬಿಗಿಬಂದೋಬಸ್ತ್ ಒದಗಿಸಲಾಗಿದೆ. ಈ ಸಂಬಂಧ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv