ನವದೆಹಲಿ: ಕೇರಳ, ಪುದುಚೇರಿ ಹಾಗೂ ಅಸ್ಸಾಂ ವಿಧಾನಸಭೆ ಚುನಾವಣೆಗಿಂದು ಮತದಾನ ಮುಗಿದಿದ್ದು, ಮತದಾರರು ಆಗಮಿಸಿ ಮತ ಚಲಾಯಿಸಿದ್ದಾರೆ.
ಸಂಜೆ 5 ಗಂಟೆ ಹೊತ್ತಿಗೆ ಪುದುಚೇರಿಯಲ್ಲಿ (Puducherry) 86.92, ಅಸ್ಸಾಂನಲ್ಲಿ (Assam) 84.42 ಹಾಗೂ ಕೇರಳದಲ್ಲಿ (Kerala) ಶೇ.75ರಷ್ಟು ಮತದಾನವಾಗಿದೆ. ಕೇರಳಂ ಸಿಎಂ ಪಿಣರಾಯಿ ವಿಜಯನ್ ಕಣ್ಣೂರಿನ ಆರ್‌ಸಿ ಅಮಲ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಆಗಮಿಸಿ, ಮತದಾನ ಮಾಡಿದ್ದಾರೆ. ಹಿರಿಯ ನಟ ಮೋಹನ್ ಲಾಲ್ ವೋಟ್ ಮಾಡಿ, ಇನ್‌ಸ್ಟಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಕೇರಳದ ತ್ರಿಶೂರ್‌ನ ವಾಣಿಯಂಪರದಲ್ಲಿ ಮತ ಚಲಾಯಿಸಿದ ನಂತರ 62 ವರ್ಷದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೈ ಎಲೆಕ್ಷನ್ ಅಖಾಡದಲ್ಲಿ ಕುರುಡು ಕಾಂಚಾಣ – ಬಾಗಲಕೋಟೆಯಲ್ಲಿ 65.68%, ದಾವಣಗೆರೆಯಲ್ಲಿ 63.04% ಮತದಾನ
ಇನ್ನೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮುಖ್ಯಮಂತ್ರಿ ಎನ್.ರಂಗಸಾಮಿ ಮೋಟಾರ್ ಸೈಕಲ್‌ನಲ್ಲಿ ಮತಗಟ್ಟೆಗೆ ಆಗಮಿಸಿ, ಮತಚಲಾಯಿಸಿದ್ದು ವಿಶೇಷ ಗಮನ ಸೆಳೆದಿದೆ. ಮತದಾನದ ನಡುವೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಗುವಾಹಟಿಯ ದೌಲ್ ಗೋವಿಂದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ಮತದಾನ ಮಾಡಿದ್ದಾರೆ. ದಿವಂಗತ ಗಾಯಕ ಜುಬೀನ್ ಗಾರ್ಗ್ ಅವರ ಪತ್ನಿ ಗರಿಮಾ ಸೈಕಿಯಾ ಗಾರ್ಗ್ ದಿಸ್ಪುರ್ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 116ರಲ್ಲಿ ಮತ ಚಲಾಯಿಸಿದ್ದಾರೆ. ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರು ದಿಬ್ರುಗಢದಲ್ಲಿ ಮತ ಚಲಾಯಿಸಿ, ನೂರು ಕ್ಷೇತ್ರ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಮಧ್ಯೆ ಬಂಗಾಳದಲ್ಲಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಅವರು, ಟಿಎಂಸಿ ಕಿತ್ತೊಗೆಯಲು ಮತದಾರರಿಗೆ ಕರೆ ನೀಡಿದ್ದಾರೆ. ವಿಪಕ್ಷ ನಾಯಕ ಸುವೇಂದು ಅಧಿಕಾರಿಯ ಭದ್ರಕೋಟೆ ಹಲ್ದಿಯಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಟಿಎಂಸಿಯ ಭ್ರಷ್ಟಾಚಾರ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳ ಎಲ್ಲಾ ಫೈಲ್‌ಗಳನ್ನು ಬಿಜೆಪಿ ಮತ್ತೆ ತೆರೆಯುತ್ತದೆ. ಅಕ್ರಮದಲ್ಲಿ ತೊಡಗಿರುವ ಎಲ್ಲಾ ನಾಯಕರನ್ನು ಜೈಲಿಗೆ ಹಾಕ್ತೇವೆ. ನಿಜವಾದ ನಾಗರಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲಾಗುವುದು, ನುಸುಳುಕೋರರು ಈ ದೇಶದಲ್ಲಿ ಉಳಿಯಲು ಬಿಡಲ್ಲ, 7ನೇ ವೇತನ ಆಯೋಗವನ್ನು ಜಾರಿಗೆ ತರುತ್ತೇವೆ ಅಂತ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಹಿಂದೂ ಸಮಾಜಕ್ಕೆ ನ್ಯಾಯ ಕೇಳುವ ಸಂಘಟನೆ RSS: ಕೋಟ ಶ್ರೀನಿವಾಸ ಪೂಜಾರಿ

