ಬೆಂಗಳೂರು: ಕರ್ನಾಟಕದಲ್ಲಿ (Karnataka) ಈಗಿರುವ ಅಧಿಕಾರ ಉಳಿಸಿಕೊಂಡರೆ 2024ಕ್ಕೆ ಸೇಫ್ ಎಂಬುದು ಬಿಜೆಪಿ ಹೈಕಮಾಂಡ್ (BJP High Command) ಕಾರ್ಯತಂತ್ರ. ಮೊದಲ ಸವಾಲು ಗೆಲ್ಲಲು ಅಮಿತ್ ಶಾ, ಮೋದಿ (Narendra Modi) ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಕರ್ನಾಟಕದ ಚುನಾವಣಾ ಮಂತ್ರ ಕುತೂಹಲ ಮೂಡಿಸಿದೆ.
Advertisement
ಲೋಕಸಭೆ ಚುನಾವಣೆಯ ಹಾದಿ ಸುಗಮ ಮಾಡಿಕೊಳ್ಳಲು ಕರ್ನಾಟಕ ವಿಧಾನಸಭೆ (Assembly Elections) ಮೇಲೆ ಬಿಜೆಪಿ ಹೈಕಮಾಂಡ್ ಕಣ್ಣಿಟ್ಟಿದೆ. ಕರ್ನಾಟಕದಲ್ಲಿ ಲೋಕಲ್ ಮಾಸ್ ಲೀಡರ್‌ಶಿಪ್ ಇಲ್ಲದಿರುವ ಕಾರಣ ಹೆಚ್ಚು ಸೆಂಟ್ರಲ್ ಫೋರ್ಸ್ ಅಖಾಡಕ್ಕಿಳಿಸುವ ಪ್ಲ್ಯಾನ್ ಇದೆ ಎನ್ನಲಾಗಿದೆ. ಫೆಬ್ರವರಿ ಮೂರನೇ ವಾರದ ಬಳಿಕ ರಾಷ್ಟ್ರೀಯ ನಾಯಕರ ದಂಡು ರಾಜ್ಯಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಕರ್ನಾಟಕದ ಗೆಲುವು 4 ರಾಜ್ಯಗಳ ಗೆಲುವಿಗೆ ಮಾಸ್ಟರ್ ಸ್ಟ್ರೋಕ್ ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ. ಇದನ್ನೂ ಓದಿ: ಜನಪ್ರಿಯ ಬಜೆಟ್ ಬ್ಲೂಪ್ರಿಂಟ್‌ಗೆ ಸಿಎಂ ಸೂಚನೆ- ಎಲೆಕ್ಷನ್ ಬಜೆಟ್‌ನಲ್ಲಿ ಬಂಪರ್ ಗಿಫ್ಟ್ ಸುರಿಮಳೆ
Advertisement
Advertisement
ಮಂಗಳವಾರ ನಡೆದ ಕಾರ್ಯಕಾರಿಣಿಯಲ್ಲೂ ಬಿಜೆಪಿ ಹೈಕಮಾಂಡ್‌ಗೆ ಕರ್ನಾಟಕದ ಚುನಾವಣೆ ಮೇಲೆಯೇ ಹೆಚ್ಚು ಫೋಕಸ್ ಇದೆ ಎನ್ನಲಾಗಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಕರ್ನಾಟಕಕ್ಕೆ ಬಿಜೆಪಿ ಹೈಕಮಾಂಡ್ ನಾಯಕರ ಅಸಲಿ ತಂತ್ರ ಶುರುವಾಗಲಿದೆ ಎನ್ನಲಾಗಿದೆ. ರಾಜ್ಯದ 6 ವಿಭಾಗಗಳಲ್ಲಿ ಕೇಂದ್ರ ನಾಯಕರನ್ನು ಅಖಾಡಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಬಿಗ್ ಪ್ಲ್ಯಾನ್ ಮಾಡಿದೆ. ಒಂದೆಡೆ ಮೋದಿ, ಶಾ, ನಡ್ಡಾ, ಯೋಗಿ ಜೋಡಿ ಕಾರ್ಯಾಚರಣೆ, ಇನ್ನೊಂದೆಡೆ ಸಂಘಟನಾ ಚತುರ ನಾಯಕರ ಕಹಳೆ ಜೋರಾಗಲಿದೆ. ಇವರಿಬ್ಬರ ತಂತ್ರ ಮಂತ್ರಗಳನ್ನು ಜನರತ್ತ ತಲುಪಿಸಲು ಲೋಕಲ್ ಲೀರ‍್ಸ್ ಟೀಂಗಳ ರಚನೆಗೂ ಪ್ಲ್ಯಾನ್ ನಡೆದಿದೆ. ಕರ್ನಾಟಕ ಗೆಲ್ಲುವ ಪಣ ಬಿಜೆಪಿ ಹೈಕಮಾಂಡ್‌ನ 2023ರ ಮೆಗಾ ಟಾರ್ಗೆಟ್ ಆಗಿದ್ದು, ಸಕ್ಸಸ್ ರೇಟಿಂಗ್ ಎಷ್ಟು ಸಿಗುತ್ತದೆ ಕಾದುನೋಡಬೇಕಿದೆ. ಇದನ್ನೂ ಓದಿ: ಭಾರತ್ ಜೋಡೋ ಎಂಟ್ರಿಗೂ ಮುನ್ನ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‍ಗೆ ಮುಜುಗರ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k