– ಚುನಾವಣೋತ್ತರ ಸಮೀಕ್ಷೆಯಲ್ಲಿ ಕಮಲ ಕಿಲಕಿಲ
– ಆನೆ ಜೊತೆ ಸೈಕಲ್ ತುಳಿಯಲು ಅಖಿಲೇಶ್ ಸಿದ್ದ
ನವದೆಹಲಿ: ದೇಶವೇ ಕುತೂಹಲದಿಂದ ಕಾಯುತ್ತಿದ್ದ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಬಹಿರಂಗವಾಗಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಪಂಜಾಬ್‍ನಲ್ಲಿ ಆಪ್, ಗೋವಾ ಅತಂತ್ರ, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಅಂತ ಸಮೀಕ್ಷೆ ನಡೆಸಿರುವ ರಾಷ್ಟ್ರೀಯ ವಾಹಿನಿಗಳು, ಸುದ್ದಿ ಸಂಸ್ಥೆಗಳು ಹೇಳಿವೆ.
ಇಂದು ಚುನಾವಣೋತ್ತರ ಸಮೀಕ್ಷೆಯಾದರೂ ಇದೇ 11ಕ್ಕೆ ಫಲಿತಾಂಶ ಅಧಿಕೃತವಾಗಿ ಹೊರಬರಲಿದೆ. ಸಮೀಕ್ಷೆಗಳ ಫಲಿತಾಂಶದಿಂದ ಬಿಜೆಪಿ ನಾಯಕರು ಹಿಗ್ಗಿದ್ದಾರೆ.
ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಇತರೆ ರಾಜ್ಯಗಳ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳೋದು ಗ್ಯಾರಂಟಿ. ಇನ್ನು, ಈ ಫಲಿತಾಂಶ ದೇಶದ ರಾಜಕೀಯ, ಆರ್ಥಿಕ, ಆಡಳಿತಾತ್ಮಕ ವಿಷ್ಯಗಳಲ್ಲಿ ಭಾರೀ ಮಹತ್ವ ಪಡೆದಿದೆ. ಈ ಮಧ್ಯೆ, ಬಿಜೆಪಿಯನ್ನ ಹೊರಗಿಡಲು ಬಿಎಸ್‍ಪಿ ಜೊತೆಗಾದರೂ ಮೈತ್ರಿಗೆ ಸಿದ್ಧ ಅಂತ ಸಿಎಂ ಅಖಿಲೇಶ್ ಯಾದವ್ ಘೋಷಿಸಿದ್ದಾರೆ.
ಹೀಗಾಗಿ ಇಲ್ಲಿ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ, ಚುನಾವಣಾ ಪೂರ್ವ ಸಮೀಕ್ಷೆ, 2012ರ ವಿಧಾನಸಭಾ ಚುನಾವಣೆ, 2014ರ ಲೋಕಸಭಾ ಚುನಾವಣಾ ಫಲಿತಾಂಶ ಮಾಹಿತಿಯನ್ನು ನೀಡಲಾಗಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪಡೆದ ಮತಗಳನ್ನು ಲೆಕ್ಕ ಹಾಕಿದ್ರೆ ಈಗ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎನ್ನುವ ಮಾಹಿತಿಯೂ ಇದೆ.
ಉತ್ತರ ಪ್ರದೇಶ
ಒಟ್ಟು ಕ್ಷೇತ್ರ – 403
ಸರಳ ಬಹುಮತ – 202
ಒಟ್ಟು 7 ಹಂತಗಳಲ್ಲಿ ಮತದಾನ
ಒಟ್ಟು ಅಭ್ಯರ್ಥಿಗಳು – 4,843
ಒಟ್ಟು ಮತದಾರರು – 10.18 ಕೋಟಿ
ಪಂಜಾಬ್
ಒಟ್ಟು ಕ್ಷೇತ್ರಗಳು – 117 ಕ್ಷೇತ್ರ
ಸರಳ ಬಹುಮತ – 59
ಒಂದೇ ಹಂತದಲ್ಲಿ ಮತದಾನ
ಒಟ್ಟು ಅಭ್ಯರ್ಥಿಗಳು – 1,145
ಒಟ್ಟು ಮತದಾರರು – 1,98,76,069

ಒಟ್ಟು ಕ್ಷೇತ್ರಗಳು – 40 ಕ್ಷೇತ್ರ
ಸರಳ ಬಹುಮತ – 21
ಒಂದೇ ಹಂತದಲ್ಲಿ ಮತದಾನ
ಒಟ್ಟು ಅಭ್ಯರ್ಥಿಗಳು – 251
ಒಟ್ಟು ಮತದಾರರು – 11,10,884
ಉತ್ತರಾಖಂಡ್
ಒಟ್ಟು ಕ್ಷೇತ್ರಗಳು – 70
ಒಂದೇ ಹಂತದಲ್ಲಿ ಮತದಾನ
ಒಟ್ಟು ಅಭ್ಯರ್ಥಿಗಳು – 628
ಒಟ್ಟು ಮತದಾರರು – 75,12,559

ಒಟ್ಟು ಕ್ಷೇತ್ರಗಳು – 60
ಎರಡು ಹಂತಗಳಲ್ಲಿ ಮತದಾನ
ಒಟ್ಟು ಅಭ್ಯರ್ಥಿಗಳು – 266
ಒಟ್ಟು ಮತದಾರರು – 19.02 ಲಕ್ಷ



















