ಮಿಜೋರಾಂ: ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‍ನ ಕೊನೆಯ ಕೊಂಡಿಯಾಗಿರುವ ಮಿಜೋರಾಂ ಈ ಬಾರಿ ಕೈ ಜಾರುವ ಎಲ್ಲ ಸಾಧ್ಯತೆ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಒಟ್ಟು 40 ವಿಧಾನಸಭಾ ಕ್ಷೇತ್ರಗಳ ಪುಟ್ಟ ರಾಜ್ಯ ಮಿಜೋರಾಂನಲ್ಲಿ ಈ ಬಾರಿ ಮಿಜೋ ನ್ಯಾಷನಲ್ ಫ್ರಂಟ್ ಕಾಂಗ್ರೆಸ್ ಗೆಲುವಿನ ಕನಸಿಗೆ ಅಡ್ಡಿಯಾಗುವ ನಿರೀಕ್ಷೆಯಿದೆ. ಹಾಲಿ ಸಿಎಂ ಹಾಗೂ 5 ಬಾರಿ ಸಿಎಂ ಆಗಿರುವ ಕಾಂಗ್ರೆಸ್‍ನ ಲಾಲ್‍ತನ್‍ಹಾವ್ಲಾ ಚಂಪೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಝೋರಾಂ ನ್ಯಾಷನಲ್ ಪಾರ್ಟಿಯ ಸ್ಥಾಪಕ ಲಾಲ್ದುಹೋಮಾ ಸರ್ಚಿಪ್ ಐಜ್ವಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದು ಪ್ರಬಲ ಎದುರಾಳಿಯಾಗಿದ್ದಾರೆ.
Advertisement
Advertisement
ಮಿಜೋರಾಂ ವಿಧಾನಸಭೆ ಫಲಿತಾಂಶ ಒಟ್ಟು 40 ಸ್ಥಾನಗಳಿದ್ದು, 21 ಅಗತ್ಯ ಬಹುಮತ ಬೇಕಾಗಿದೆ. 2013ರ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ 34, ಎಂಎನ್‍ಎಫ್ 05 ಹಾಗೂ ಇತರೆ 01 ಸ್ಥಾನ ಪಡೆದುಕೊಂಡಿತ್ತು. 2013ರ ವಿಧಾನಸಭೆ ಚುನಾವಣೆಯ ಮತಗಳಿಕೆಯಲ್ಲಿ ಕಾಂಗ್ರೆಸ್ ಶೇ. 44.9, ಎಂಎನ್‍ಎಫ್ ಶೇ. 28.8 ಹಾಗೂ ಇತರೆ ಶೇ. 6.9 ಮತಗಳನ್ನು ಪಡೆದಿತ್ತು. ಮಿಜೋರಾ0 ಮತದಾನೋತ್ತರ ಸಮೀಕ್ಷೆ ಒಟ್ಟು 40 ಸ್ಥಾನಗಳಿದ್ದು, 21 ಬಹುಮತ ಬೇಕಾಗಿದೆ.
Advertisement
ಮಿಜೋರಾಂ ಯಾರಿಗೆ ಪ್ಲಸ್? ಯಾರಿಗೆ ಮೈನಸ್?
ಬಿಜೆಪಿ ಅಧಿಕಾರದಿಂದ ದೂರ ಉಳಿದಿರುವ ಈಶಾನ್ಯ ಭಾರತದ ಏಕೈಕ ರಾಜ್ಯ ಮಿಜೋರಾಂ ಆಗಿದ್ದು, ಇದು ಕಾಂಗ್ರೆಸ್ ಕೈಯಲ್ಲಿರುವ ಏಕೈಕ ಈಶಾನ್ಯ ರಾಜ್ಯ ಆಗಿದೆ. ಮಿಜೋರಾಂ ಸತತ ಎರಡು ಬಾರಿ ಕೈ ಅಧಿಕಾರದಲ್ಲಿದೆ. ಸತತ ಮೂರು ಬಾರಿ ಯಾವ ಪಕ್ಷಕ್ಕೂ ಅಧಿಕಾರ ಸಿಕ್ಕಿಲ್ಲ. ಅಧಿಕಾರಕ್ಕೆ ಬಂದರೆ ಮಿಜೋರಾಂ ನ್ಯಾಷನಲ್ ಫ್ರಂಟ್ ಸಂಪೂರ್ಣ ಮದ್ಯ ನಿಷೇಧದ ಭರವಸೆ ನೀಡಿದೆ. ಕ್ರಿಶ್ಚಿಯನ್ ಪ್ರಾಬಲ್ಯವಿರುವ ರಾಜ್ಯದಲ್ಲಿ ಬಿಜೆಪಿ ಮುಂದೆ ಬೆಟ್ಟದಂತಹ ಸವಾಲಿದೆ. ಕಾಂಗ್ರೆಸ್‍ನಲ್ಲಿ ಸ್ಪೀಕರ್, ಗೃಹ ಸಚಿವರು, ಮೂವರು ಶಾಸಕರು ರಾಜೀನಾಮೆಯಿಂದ ಆಂತರಿಕ ಕಚ್ಚಾಟ ನಡೆಸಿದ್ದಾರೆ. ಹದಗೆಟ್ಟ ರಸ್ತೆಗಳು, ನಿರುದ್ಯೋಗ, ರೈತರ ಸಂಕಷ್ಟ ಈ ವಿಷಯಗಳು ಕಾಂಗ್ರೆಸ್‍ಗೆ ಕಂಟಕವಾಗಬಹುದು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv