ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈ ಬಾರಿ ಕುಟುಂಬ ರಾಜಕಾರಣದ ಇಂಟರ್ನಲ್ ಫೈಟ್ ಜೋರಾಗುವ ಲಕ್ಷಣಗಳು ಕಾಣುತ್ತಿವೆ. ಕುಟುಂಬದೊಳಗಿನ ಸದಸ್ಯರ ರಾಜಕೀಯ ಅಖಾಡದ ಜಿದ್ದಾಜಿದ್ದಿಗೆ ಸಾಕಷ್ಟು ಕುಟುಂಬಗಳು ಸಾಕ್ಷಿಯಾಗಲಿವೆ.
ಹಾಸನದಲ್ಲಿ ದಾಯಾದಿ ಕಲಹ, ಬಳ್ಳಾರಿಯಲ್ಲಿ ಸಹೋದರರ ಸವಾಲು ನಡುವೆ ಶಿವಮೊಗ್ಗದಲ್ಲೂ ಸಹೋದರ ಸವಾಲು ಫಿಕ್ಸ್ ಆಗಿದೆ. ಶಿವಮೊಗ್ಗದಲ್ಲಿ ಸಹೋದರರ ಸವಾಲು ಈ ಸಲವೂ ಅದೇ ಖದರ್‌ನಿಂದ ನಡೆಯುವುದು ಫಿಕ್ಸ್ ಎಂಬಂತಾಗಿದೆ. ಕುಮಾರ ಬಂಗಾರಪ್ಪ (Kumar Bangarappa) ಹಾಗೂ ಮಧು ಬಂಗಾರಪ್ಪ (Madhu Bangarappa) ನಡುವೆ ಈ ಬಾರಿ ಮತ್ತೆ ನಿರ್ಣಾಯಕ ಕದನ ಸೊರಬದಲ್ಲಿ ಫಿಕ್ಸ್ ಆಗಿದೆ.
ಸೋಲಿನ ಕಹಿಯಿಂದ ಹೊರಬಂದು ಅಣ್ಣನಿಗೆ ಸೋಲಿನ ರುಚಿ ತೋರಿಸುವುದು ಮಧು ಬಂಗಾರಪ್ಪ ಲೆಕ್ಕಾಚಾರವಾದರೆ, ಈ ಬಾರಿಯೂ ಗೆಲುವು ಮುಂದುವರಿಸಿ ಸಹೋದರ ಮಧು ಬಂಗಾರಪ್ಪನನ್ನು 2ನೇ ಬಾರಿಯೂ ಸೋಲಿಸುವುದು ಕುಮಾರ ಬಂಗಾರಪ್ಪ ಲೆಕ್ಕಾಚಾರ ಎನ್ನಲಾಗಿದೆ. ಇದನ್ನೂ ಓದಿ: ಕೂಸು ಹುಟ್ಟುವ ಮುನ್ನ ಕಾಂಗ್ರೆಸ್‌ನಲ್ಲಿ ಮತ್ತೇ ಕುಲಾವಿ ಹೊಲಿಸುವ ಪ್ರಯತ್ನ ಜೋರು
ರಾಜ್ಯದ ಸಾಕಷ್ಟು ಕ್ಷೇತ್ರಗಳಲ್ಲಿ ಈ ಬಾರಿ ಕುಟುಂಬ ಕದನ, ದಾಯಾದಿ ಕಲಹ, ಸಹೋದರರ ಸವಾಲು ನಡೆಯೋದು ಫಿಕ್ಸ್ ಎನ್ನಲಾಗಿದೆ. ಇದರ ಮಧ್ಯೆ ಶಿವಮೊಗ್ಗದ (Shivamogga) ಅಂಗಳದಲ್ಲಿ ಸೊರಬದ ಅಖಾಡದಲ್ಲಿ ಕುಮಾರ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ನಡುವಿನ ಫೈಟ್ ಈ ಬಾರಿ ಮತ್ತಷ್ಟು ಜೋರಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಹಾಸನ ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿ-ರೇವಣ್ಣ ಸಂಧಾನವೋ? ಸಂಘರ್ಷವೋ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k