ಮುಂಬೈ: ಸೋಲನ್ನು ಒಪ್ಪಿಕೊಳ್ಳುವುದು ಕೆಲವೊಮ್ಮೆ ಸುಲಭವಾಗುತ್ತದೆ ಆದರೆ ಬಿಜೆಪಿ ಗೆಲುವನ್ನು ಜೀರ್ಣಿಸಲು ಕಲಿಯಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್‍ನಲ್ಲಿ ಎಎಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಆದರೆ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದೆ. ಕಾಂಗ್ರೆಸ್ ಪಕ್ಷದ ಚುನಾವಣಾ ನಿರ್ವಹಣೆ ಸಾಕಷ್ಟು ಉತ್ತಮವಾಗಿಲ್ಲ ಎಂದು ತಿಳಿಸಿದರು.
ಅಖಿಲೇಶ್ ಯಾದವ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎಸ್‍ಪಿ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಉತ್ತರಪ್ರದೇಶದ ಸಂಖ್ಯಾಬಲ ಹೆಚ್ಚಾಗುತ್ತಿತ್ತು ಎಂದರು. ಇದನ್ನೂ ಓದಿ: ಗೋವಾಗೂ ಎಂಟ್ರಿ ಕೊಟ್ಟ AAP
ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದ ಅವರು, ಗೋವಾ ಚುನಾವಣೆಗೂ ಮುನ್ನ ಶಿವಸೇನೆ ಹಾಗೂ ಎನ್‍ಸಿಪಿ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದೆವು. ಆದರೆ ಉತ್ತರಪ್ರದೇಶ ಹಾಗೂ ಗೋವಾದಲ್ಲಿ ಶಿವಸೇನೆ ಸೋತಿದೆ. ಇದು ಕೇವಲ ಆರಂಭ. ನಮ್ಮ ಹೋರಾಟ ಮುಂದುವರೆಯುತ್ತದೆ. ನಾವು ಮಹಾರಾಷ್ಟ್ರದ ಹೊರಗೆ ಹೋರಾಟವನ್ನು ಮುಂದುವರಿಸುತ್ತೇವೆ. ಇದನ್ನೂ ಓದಿ: 16 ಚಿನ್ನದ ಪದಕ ಪಡೆಯುವ ಮೂಲಕ ಹೊಸ ದಾಖಲೆ ಮಾಡಿದ ಚಿನ್ನದ ಹುಡುಗಿ!