ಬೆಂಗಳೂರು: ಬಿಜೆಪಿ ಮತದಾರರರು ಸೈಲೆಂಟ್ ಆಗಿ ಉತ್ತರ ಕೊಟ್ಟಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ಪಂಚರಾಜ್ಯಗಳ ಮತಎಣಿಕೆ ನಡೆಯುತ್ತಿದ್ದು, ಮಣಿಪುರ, ಉತ್ತರಪ್ರದೇಶ ಮತ್ತು ಉತ್ತರಖಂಡ ಪ್ರದೇಶದಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದೆ. ಈ ಹಿನ್ನೆಲೆ ಕಮಲದ ಸದಸ್ಯರು ಗೆಲುವಿನ ನಗೆ ಬೀರಿದ್ದಾರೆ. ತೇಜಸ್ವಿ ಸೂರ್ಯ ಟ್ವಟ್ಟರ್‌ನಲ್ಲಿ, ಸೈಲೆಂಟ್ ಆಗಿಯೇ ಬಿಜೆಪಿ ಮತದಾರರು ಮತದಾನ ಮಾಡುವ ಮೂಲಕ ದೊಡ್ಡ ಸಂದೇಶ ನೀಡಿದ್ದಾರೆ ಎಂದು ಸಂತೋಷವನ್ನು ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣಾ ಫಲಿತಾಂಶ: ಬಿಜೆಪಿ, ಕಾಂಗ್ರೆಸ್ ಮಧ್ಯೆ ಹಾವು ಏಣಿ ಆಟ
Advertisement
The silent BJP voter gives the loudest message on poll day. #Elections2022 #Modi #BJPAgain
— Tejasvi Surya (@Tejasvi_Surya) March 10, 2022
Advertisement
ಪಬ್ಲಿಕ್ ಟಿವಿ ಜೊತೆ ಸಂತಸವನ್ನು ಹಂಚಿಕೊಂಡ ತೇಜಸ್ವಿ ಸೂರ್ಯ, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ನಂಬಿಕೆ ಇತ್ತು. ಆದರೆ ಈ ಗೆಲುವು ಬಿಜೆಪಿ ಶ್ರಮವನ್ನು ತೋರಿಸುತ್ತೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಡಬಲ್ ಇಂಜಿನ್ ಸರ್ಕಾರ ನಡೆಸಿದ್ದಾರೆ. ಇವರ ಯಶಸ್ವಿ ನಡೆಗೆ ಜನರೇ ಉತ್ತರ ಕೊಟ್ಟಿದ್ದಾರೆ ಎಂದರು.
Advertisement
Advertisement
ಈ ಹಿಂದೆ ಉ.ಪ್ರದೇಶದಲ್ಲಿ ಹೆಣ್ಣು ಮಕ್ಕಳು ಹೊರಗೆ ಹೋಗಲು ಹೆದರಿಕೊಳ್ಳುತ್ತಿದ್ದರು. ಆದರೆ ಈಗ ಎಲ್ಲ ಜಾತಿ ಮಹಿಳೆಯರಿಗೂ ಬಿಜೆಪಿ ಸರ್ಕಾರ ಬಂದ ಮೇಲೆ ಧೈರ್ಯ ಬಂದಿದೆ. ಬಿಜೆಪಿ ಸರ್ಕಾರ ಅಲ್ಲಿನ ಜನರಿಗಾಗಿ ಒಳ್ಳೆಯ ಕೆಲಸವನ್ನು ಮಾಡಿದೆ. ಕೋವಿಡ್ ಸಮಯದಲ್ಲಿಯೂ ಸಹ ಅಲ್ಲಿನ ಜನರಿಗೆ ಯಾವ ರೀತಿ ಸಹಾಯ ಮಾಡಬೇಕು ಅದನ್ನು ಬಿಜೆಪಿ ಮಾಡಿದ್ದೇವೆ ಎಂದು ವಿವರಿಸಿದರು.
ಉ.ಪ್ರದೇಶ ಕಾಶಿ ವಿಶ್ವಾನಾಥ, ಇನ್ನು ಮುಂತಾದ ಪ್ರದೇಶದ ಪ್ರವಾಸಿ ಸ್ಥಳಗಳಿಗೂ ಹೆಚ್ಚು ಒತ್ತುಕೊಟ್ಟು ಕೆಲ ಮಾಡಿದ್ದಾರೆ. ಮಣಿಪುರದಲ್ಲಿ ಬಿಜೆಪಿ ಇರಲಿಲ್ಲ. ಯಾವ ರಾಜ್ಯದಲ್ಲಿ ನಮ್ಮ ಬಿಜೆಪಿ ಆಸ್ತಿತ್ವವೇ ಇರಲಿಲ್ಲವೂ, ಅದೇ ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಅದು ಬಿಜೆಪಿ ಸಾಧನೆ. ನಾವು ಜನರ ಯಾವುದೇ ವಿಶ್ವಾಸ ಕಳೆದುಕೊಂಡಿಲ್ಲ. ಜನರಿಗೆ ಕೊಡಬೇಕಾದ ಎಲ್ಲ ಸೌಕರ್ಯಗಳನ್ನು ನಾವು ಬಿಜೆಪಿ ಮಾಡಿಕೊಟ್ಟಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪಾದಯಾತ್ರೆ ನಿಲ್ಲಿಸಿ ತೀರ್ಥಯಾತ್ರೆ ಮಾಡಿ – ಕಾಂಗ್ರೆಸ್‍ಗೆ ಆರ್.ಅಶೋಕ್ ಸಲಹೆ
ಗೋವಾದಲ್ಲಿ ನಮ್ಮ ಬಿಜೆಪಿ 10 ವರ್ಷಗಳಿಂದ ಅಧಿಕಾರದಲ್ಲಿದೆ. ಈ ಮೂಲಕವೇ ಬಿಜೆಪಿ ಜನರಿಗೆ ಎಷ್ಟೂ ಹತ್ತಿರವಾಗಿದೆ ಎಂಬುದು ತಿಳಿಯುತ್ತೆ. ನಮ್ಮ ಪಕ್ಷ ಬಿಟ್ಟು ಬೇರೆ ಪಕ್ಷಗಳು ಕಣ್ಮರೆಯಾಗುತ್ತೆ ಎಂದು ಭವಿಷ್ಯ ನುಡಿದರು.