ಬೆಂಗಳೂರು: ಬುಧವಾರ ರಾಜ್ಯ ವಿಧಾನಸಭಾ ಚುನಾವಣೆಯ (Assembly Election) ದಿನಾಂಕ ಘೋಷಣೆಯಾಗಲಿದ್ದು, ಬಿಜೆಪಿಯಲ್ಲಿ (BJP) ಚುನಾವಣಾ ಚಟುವಟಿಕೆಗಳು ಚುರುಕುಗೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ರಾಜ್ಯ ಪ್ರವಾಸವನ್ನು ಮೊಟಕುಗೊಳಿಸಿ ಮಂಗಳವಾರ ತಡರಾತ್ರಿಯೇ ಬೆಂಗಳೂರಿಗೆ (Bengaluru) ವಾಪಸಾಗಿದ್ದಾರೆ.
ಬೊಮ್ಮಾಯಿಯವರು ನಿಗದಿತ ಕಾರ್ಯಕ್ರಮದಂತೆ ಸವದತ್ತಿ ಕಾರ್ಯಕ್ರಮದ ಬಳಿಕ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಿ, ಸ್ವಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಆದರೆ ರಾತ್ರಿಯೇ ಹುಬ್ಬಳ್ಳಿ ವಾಸ್ತವ್ಯವನ್ನು ರದ್ದುಗೊಳಿಸಿ ಬೆಂಗಳೂರಿಗೆ ಸಿಎಂ ವಾಪಸ್ ಆಗಿದ್ದಾರೆ. ಸಿಎಂಗೆ ನಿನ್ನೆಯೇ ಚುನಾವಣೆ ಘೋಷಣೆಯ ಸುಳಿವಿತ್ತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಇದನ್ನೂ ಓದಿ: ನೀವು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ 47ರ ಕಾಲವಲ್ಲ- SDPI ಮುಖಂಡನಿಗೆ ಸಿ.ಟಿ ರವಿ ವಾರ್ನಿಂಗ್
Advertisement
Advertisement
ಸ್ವಕ್ಷೇತ್ರದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಬೇಕಿತ್ತು. ಇದೀಗ ಕೊಪ್ಪಳ, ಹಾವೇರಿ ಜಿಲ್ಲಾ ಪ್ರವಾಸ ಮೊಟಕುಗೊಳಿಸಲಾಗಿದೆ. ಬುಧವಾರಕ್ಕೆ ನಿಗದಿಯಾಗಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳೂ ರದ್ದಾಗಿದೆ. ಸಿಎಂ, ಸಚಿವರ, ಶಾಸಕರ ಸರ್ಕಾರಿ ಕಾರ್ಯಕ್ರಮಗಳು ರದ್ದಾಗಿವೆ.
Advertisement
ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿರುವ ಹಿನ್ನೆಲೆ ಬಿಜೆಪಿಯಲ್ಲಿ ಚುನಾವಣಾ ಚಟುವಟಿಕೆಗಳು ಚುರುಕುಗೊಂಡಿದೆ. ಜಿಲ್ಲಾ ಬಿಜೆಪಿ ಘಟಕಗಳಿಗೆ ಬಿಜೆಪಿ ಪಕ್ಷದಿಂದ ತುರ್ತು ಅಲರ್ಟ್ ಸಂದೇಶ ರವಾನೆಯಾಗಿದೆ. ಕ್ಷೇತ್ರವಾರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಕುರಿತ ಆಂತರಿಕ ಸರ್ವೆಗಳನ್ನು ಬೇಗ ಮುಗಿಸುವಂತೆ ಸೂಚನೆ ನೀಡಲಾಗಿದೆ. ಮೋದಿ, ಅಮಿತ್ ಶಾ ಅವರ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ, ಶಂಕುಸ್ಥಾಪನೆ ಕಾರ್ಯಕ್ರಮಗಳಿಗೆ ಸದ್ಯ ಬ್ರೇಕ್ ನೀಡಲಾಗಿದ್ದು, ಇನ್ಮುಂದೆ ಪಕ್ಷದ ಚುನಾಚಣಾ ಪ್ರಚಾರ, ರ‍್ಯಾಲಿಗಳಿಗೆ ಮಾತ್ರ ವರಿಷ್ಠರು ಬರಲಿದ್ದಾರೆ. ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್