– ಮೋದಿ ಭೇಟಿ ಬೆನ್ನಲ್ಲೇ ಸಿಎಂ ಫುಲ್ ಅಲರ್ಟ್
– ನೆನೆಗುದಿಗೆ ಬಿದ್ದಿದ್ದ ಉತ್ತರ ಕರ್ನಾಟಕದ ವಿವಿಧ ಕಾಮಗಾರಿಗಳಿಗೆ ವೇಗ ನೀಡಿದ ಸಿಎಂ
– ನೆನೆಗುದಿಗೆ ಬಿದ್ದಿದ್ದ ಉತ್ತರ ಕರ್ನಾಟಕದ ವಿವಿಧ ಕಾಮಗಾರಿಗಳಿಗೆ ವೇಗ ನೀಡಿದ ಸಿಎಂ
ಹುಬ್ಬಳ್ಳಿ: ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದೆ. ಮೊನ್ನೆ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಬೊಮ್ಮಾಯಿ ಸರ್ಕಾರ ಫುಲ್ ಆಕ್ಟಿವ್ ಆಗಿದೆ.
ಆಮೆಗತಿಯಲ್ಲಿ ಸಾಗಿದ್ದ ಮತ್ತು ನೆನೆಗುದಿಗೆ ಬಿದ್ದಿದ್ದ ವಿವಿಧ ಕಾಮಗಾರಿಗಳಿಗೆ ವೇಗವನ್ನು ನೀಡುತ್ತಿದೆ. ಉತ್ತರ ಕರ್ನಾಟಕದ ಮೇಲೆ ಕಣ್ಣುಹಾಯಿಸಿರುವ ಸಿಎಂ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವೇಗ ನೀಡಿದ ಬೆನ್ನಲ್ಲೇ, ಹುಬ್ಬಳ್ಳಿಯ ಸ್ಮಾರ್ಟ್ ಸಿಟಿ ಕಾಮಗಾರಿಗಳತ್ತ ಗಮನ ನೀಡಿದ್ದು, ಈ ನಿಟ್ಟಿನಲ್ಲಿ ಕೋಟಿ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.
Advertisement
Advertisement
ಹಾವೇರಿಯಲ್ಲಿ ಸಿಎಂ ಮನೆ ಇದ್ದರೂ, ಅದ್ಯಾಕೋ ಏನೋ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಯೋಜನೆಗಳು ಆಮೆಗತಿಯಲ್ಲಿ ಸಾಗಿದ್ದವು. ವಾರಕ್ಕೊಮ್ಮೆ ಹುಬ್ಬಳ್ಳಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡುತ್ತಿದ್ದರೂ, ಮದುವೆ, ನಾಮಕರಣ, ವಾಣಿಜ್ಯ ಮಳಿಗೆಗಳ ಉದ್ಘಾಟನೆಗೆ ಭೇಟಿ ಸೀಮಿತವಾಗುತ್ತಿತ್ತು. ಆದರೆ ಇದೀಗ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿಚಾರದಲ್ಲಿ ಫುಲ್ ಅಲರ್ಟ್ ಆಗಿರುವ ಸಿಎಂ, ಪಕ್ಷದ ಭೇದವನ್ನು ಮರೆತು ಕಾಮಗಾರಿಗಳಿಗೆ ವೇಗ ನೀಡಿದ್ದಾರೆ. ಜೊತೆಗೆ ಪೂರ್ಣಗೊಂಡಿರುವ ಕೆಲಸಗಳಿಗೆ ಉದ್ಘಾಟನಾ ಭಾಗ್ಯವನ್ನು ಸಹ ಕರುಣಿಸಿದ್ದಾರೆ. ಇದನ್ನೂ ಓದಿ: ಬಂಡಾಯ ಶಾಸಕರು ಜೀವಂತ ಶವಗಳಾಗಿ ವಾಪಸ್ ಬರಲಿದ್ದಾರೆ: ಸಂಜಯ್ ರಾವತ್
Advertisement
Advertisement
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಂಡಿರುವ 2.8 ಕೋಟಿ ವೆಚ್ಚದ ವಿದ್ಯುತ್ ಚಿತಾಗಾರ, 31.40 ಕೋಟಿ ವೆಚ್ಚದ ರಸ್ತೆ ಮತ್ತು ಬೀದಿ ದೀಪ, 1,050 ಮನೆಗಳಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಕಾಮಗಾರಿ ಲೋಕಾರ್ಪಣೆಗೊಳಿಸಿದರು. ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಕ್ಷೇತ್ರದ ಘಂಟಿಕೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಸಹ ಭಾಗಿಯಾಗಿದರು. ಇದನ್ನೂ ಓದಿ: ಅಜ್ಜಿ ಕುಳಿತ ಆಟೋ ರಿಕ್ಷಾದ ಬಳಿ ಬಂದು ಪ್ರಕರಣ ಇತ್ಯರ್ಥಗೊಳಿಸಿದ ಜಡ್ಜ್